ಸಾಮಾನ್ಯವಾಗಿ ಕರುಳಿನ ಕ್ಯಾನ್ಸರ್ ಸಮಸ್ಯೆಗೆ ನಾವು ತಿನ್ನುವ ಆಹಾರವೇ ಕಾರಣವಾಗುತ್ತದೆ. ಸುಲಭವಾಗಿ ಜೀರ್ಣವಾಗದ, ಖಾರ, ಮಸಾಲೆಗಳನ್ನು ನಿತ್ಯ ಸೇವಿಸುವುದು ಅಲ್ಸರ್ ಮೊದಲಾದ ಕಾಯಿಲೆಗಳಿಗೆ ಕಾರಣವಾಗಿ ಇದೇ ಮುಂದೆ ಕ್ಯಾನ್ಸರ್ ಆಗಿ ಬದಲಾಗುತ್ತದೆ.
ಈ ಕೆಲವು ವಸ್ತುಗಳನ್ನು ನಿತ್ಯ ನಿಮ್ಮ ಆಹಾರದಲ್ಲಿ ಬಳಸುವ ಮೂಲಕ ಜೀರ್ಣಶಕ್ತಿಯನ್ನು ಸಕ್ರಿಯಗೊಳಿಸಬಹುದು. ಹಾಗೂ ಅದರಿಂದ ಉಂಟಾಗುವ ಹಲವು ರೋಗಗಳಿಂದ ದೂರವಿರಬಹುದು.
ನಿತ್ಯ ನಿಮ್ಮ ಅಡುಗೆಯ ಮಸಾಲೆಯಲ್ಲಿ ಅಥವಾ ಒಗ್ಗರಣೆ ರೂಪದಲ್ಲಿ ಜೀರಿಗೆ ಬಳಸಿ. ಇದು ಕರುಳಿನಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಮಾರಣಾಂತಿಕ ಕಾಯಿಲೆಯನ್ನು ದೂರ ಮಾಡುವ ಜೀರಿಗೆ ಉಪಯೋಗಿಸಿ.
ಸೀಬೆ ಅಥವಾ ಪೇರಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕರುಳಿನ ಕೋಶಗಳಿಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸಿ ಕ್ಯಾನ್ಸರ್ ಅನ್ನು ದೂರ ಮಾಡುತ್ತದೆ.
ಬೆಂಡೆಕಾಯಿ ಗ್ಯಾಸ್ಟ್ರಿಕ್ ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕರುಳಿನ ಕೋಶಗಳನ್ನು ಬಲಪಡಿಸಿ ಕ್ಯಾನ್ಸರ್ ವಿರೋಧಿ ಏಜೆಂಟ್ ಗಳಾಗಿ ಕೆಲಸ ಮಾಡುತ್ತವೆ.