ಚಳಿಗಾಲದಲ್ಲಿ ಬೆವರೋದು ಕಡಿಮೆ. ಬಾಯಾರಿಕೆ ಕೂಡ ಆಗೋದಿಲ್ಲ. ಇದು ನಿರ್ಜಲೀಕರಣ ಸಮಸ್ಯೆಗೆ ಕಾಡುತ್ತದೆ. ನಿರ್ಜಲೀಕರಣದಿಂದಾಗಿ ಅನೇಕ ಸಮಸ್ಯೆಗಳುಂಟಾಗುತ್ತವೆ. ಚಳಿಗಾಲದಲ್ಲಿ ಇದ್ರಿಂದ ತಪ್ಪಿಸಿಕೊಳ್ಳಲು ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ.
ಅಚ್ಚರಿ….! ಬರೋಬ್ಬರಿ 40 ವರ್ಷ ನಿದ್ರೆ ಮಾಡಿರಲಿಲ್ಲ ಈ ವ್ಯಕ್ತಿ
ಚಳಿಗಾಲದಲ್ಲಿ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ದಿನದಲ್ಲಿ ಒಂದು ಬಾರಿ ನೀರಿಗೆ ಸ್ವಲ್ಪ ಉಪ್ಪು ಹಾಗೂ ಸಕ್ಕರೆಯನ್ನು ಹಾಕಿ ಕುಡಿಯಬೇಕು.
ಪ್ರತಿದಿನ 8-10 ಗ್ಲಾಸ್ ಬೆಚ್ಚಗಿನ ನೀರು ಕುಡಿಯುವುದ್ರಿಂದ ನಿರ್ಜಲೀಕರಣ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.
ಪ್ರತಿದಿನ ಒಂದು ಎಳೆನೀರು ಸೇವನೆ ಮಾಡುವುದು ಒಳ್ಳೆಯದು. ಇದು ದೇಹದಲ್ಲಿ ನೀರು ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.
ಮಸಾಲೆಯುಕ್ತ ಆಹಾರ, ಕಾಫಿ, ತಂಪು ಪಾನೀಯ, ಚಾಕಲೇಟ್ ತಿನ್ನುವುದ್ರಿಂದ ಚಳಿಗಾಲದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಈ ಆಹಾರದಿಂದ ದೂರವಿರುವುದು ಒಳ್ಳೆಯದು.
ಜಿಮ್ ಉಡುಗೆ ತೊಟ್ಟು ಹಾಟ್ ಲುಕ್‍ನಲ್ಲಿ ಕಾಣಿಸಿಕೊಂಡ ನಟಿ ಪೂಜಾ ಹೆಗ್ಡೆ
ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ಕೂಡ ನಿರ್ಜಲೀಕರಣದ ಸಮಸ್ಯೆ ಕಾಡುತ್ತದೆ.
ಚಳಿಗಾಲದಲ್ಲಿ ನೀರಿನ ಅಂಶ ಹೆಚ್ಚಿರುವ ತರಕಾರಿ, ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಿ.
ಊಟದ ನಂತ್ರ ಹಾಗೂ ಮೊದಲು ಒಂದು ಗ್ಲಾಸ್ ನೀರನ್ನು ಅವಶ್ಯವಾಗಿ ಕುಡಿಯಿರಿ. ಇದು ದೇಹದಲ್ಲಿ ನೀರು ಕೊರತೆಯಾಗುವುದನ್ನು ತಪ್ಪಿಸುತ್ತದೆ.
ವ್ಯಾಯಾಮಕ್ಕಿಂತ ಮೊದಲು ಹಾಗೂ ನಂತರ ನೀರು ಅಥವಾ ನಿಂಬೆ ಹಣ್ಣಿನ ಪಾನಕವನ್ನು ಕುಡಿಯಿರಿ.