ಚಳಿಗಾಲದಲ್ಲಿ ಮೈ ಒಡೆಯೋದು ಸಾಮಾನ್ಯ. ಕೆಲವರ ಚರ್ಮ ಬಿರುಕು ಬಿಡಲು ಶುರುವಾಗುತ್ತದೆ. ಕೈಕಾಲುಗಳು ತೇವಾಂಶ ಕಳೆದುಕೊಂಡು ಒಣಗಿ ಹೋಗಿರುತ್ತವೆ. ತುರಿಕೆ, ಉರಿ ಕೂಡ ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ತುಟಿ ಸೌಂದರ್ಯ ಕಳೆದುಕೊಳ್ಳುತ್ತದೆ. ಕೆಲವರಿಗೆ ಒಣ ತುಟಿಯಿಂದ ರಕ್ತ ಬರುವುದುಂಟು. ಹಾಗಾಗಿ ಚಳಿಗಾಲದಲ್ಲಿ ತುಟಿಗಳ ಆರೈಕೆ ಬಹಳ ಮುಖ್ಯ.
ಚಳಿಗಾಲದಲ್ಲಿ ಒಣ ಹವೆಯಿಂದಾಗಿ ತುಟಿ ಒಡೆಯುತ್ತದೆ. ಚಳಿಗಾಲದಲ್ಲಿ ಚರ್ಮಕ್ಕೆ ತೇವಾಂಶದ ಅಗತ್ಯವಿರುತ್ತದೆ. ಹಾಗಾಗಿ ನೀವು ಗ್ಲಿಸರಿನ್ ಬಳಕೆ ಮಾಡುವುದು ಒಳ್ಳೆಯದು. ಇದೊಂದು ನೈಸರ್ಗಿಕ ಲಿಪ್ ಬಾಮ್. ಗ್ಲಿಸರಿನ್, ತುಟಿಯಲ್ಲಿನ ತೇವಾಂಶವನ್ನು ಒಣಗಲು ಬಿಡುವುದಿಲ್ಲ.
ತುಟಿಗಳ ಮೇಲೆ ಕಲೆಗಳಿದ್ದು, ಅವು ಕಪ್ಪಗಾಗ್ತಾ ಇದ್ದರೂ ನೀವು ಗ್ಲಿಸರಿನ್ ಬಳಕೆ ಮಾಡಬಹುದು. ಸಿಗರೇಟ್ ಸೇವನೆ ಮಾಡುವುದರಿಂದಲೂ ತುಟಿಗಳು ಕಪ್ಪಗಾಗುತ್ತವೆ. ಗ್ಲಿಸರಿನ್ ಹಚ್ಚಿದ್ರೆ ಕಪ್ಪು ಕಲೆ ಮಾಯವಾಗೋದ್ರಲ್ಲಿ ಸಂಶಯವಿಲ್ಲ. ತುಟಿಯ ಮೇಲೆ ಗಾಯಗಳಾಗಿದ್ದರೂ ನೀವು ಗ್ಲಿಸರಿನ್ ಹಚ್ಚಿ ಗುಣಪಡಿಸಿಕೊಳ್ಳಬಹುದು. ಕೈ-ಕಾಲಿಗೂ ಗ್ಲಿಸರಿನ್ ಬಳಕೆ ಮಾಡಬಹುದು. ತೇವಾಂಶವನ್ನು ಹಿಡಿದಿಡುವ ಶಕ್ತಿ ಗ್ಲಿಸರಿನ್ ಗಿದ್ದು, ಚಳಿಗಾಲದಲ್ಲಾಗುವ ಕಿರಿಕಿರಿಯನ್ನು ಇದು ತಪ್ಪಿಸುತ್ತದೆ.