ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ನಿಂದ ಹಿಡಿದು ಮನೆ ಮದ್ದಿನವರೆಗೆ ಎಲ್ಲ ಪ್ರಯೋಗಗಳನ್ನು ಮಾಡ್ತಾರೆ.
ಆದ್ರೆ ಕೈ, ಕಾಲಿನ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದ್ರಿಂದಾಗಿ ಕೈಗಳು ಒರಟಾಗಿ ತೇವಾಂಶವಿಲ್ಲದೆ ಸೌಂದರ್ಯ ಕಳೆದುಕೊಳ್ಳುತ್ತವೆ. ಚಳಿಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ಚಳಿಗಾಲದಲ್ಲಿ ಕೈಗಳ ಸೌಂದರ್ಯವನ್ನು ಮನೆ ಮದ್ದಿನ ಮೂಲಕ ಹೆಚ್ಚಿಸಿಕೊಳ್ಳಬಹುದು.
ಮೊಸರು-ಅರಿಶಿನ : ಒಂದು ಕಪ್ ಮೊಸರಿಗೆ ಒಂದು ಚಮಚ ಅರಿಶಿನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಕೈಗೆ ಹಚ್ಚಿ 20 ನಿಮಿಷ ಬಿಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ಕೈಗಳನ್ನು ತೊಳೆದುಕೊಳ್ಳಿ.
ಅಲೋವೆರಾ : ರಾತ್ರಿ ಕೈಗಳಿಗೆ ಅಲೋವೆರಾ ಜೆಲ್ ಹಚ್ಚಿ ಮಲಗಿ. ಬೆಳಿಗ್ಗೆ ಕೈ ಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ನಂತ್ರ ಮಾಯಶ್ಚರೈಸರ್ ಕ್ರೀಂನಿಂದ ಮಸಾಜ್ ಮಾಡಿ.
ಸೌತೆಕಾಯಿ : ಸೌತೆಕಾಯಿ ರಸಕ್ಕೆ 3-4 ಹನಿ ನಿಂಬೆ ರಸವನ್ನು ಬೆರೆಸಿ ಚಿಟಕಿ ಅರಿಶಿನ ಹಾಗೂ ಒಂದು ಚಮಚ ಆಲಿವ್ ಆಯಿಲ್ ಮಿಕ್ಸ್ ಮಾಡಿ. ಇದನ್ನು ಕೈಗೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತ್ರ ಕೈಗಳನ್ನು ಸ್ವಚ್ಛ ನೀರಿನಲ್ಲಿ ತೊಳೆದುಕೊಳ್ಳಿ.