
ಕಣ್ಣುಗಳು ದೇಹದ ಪ್ರಮುಖ ಭಾಗಗಳಲ್ಲಿ ಒಂದು. ಮಿತಿ ಮೀರಿದ ಮೊಬೈಲ್, ಟಿವಿ ಬಳಕೆ ಕಣ್ಣಿನ ಸೌಂದರ್ಯವನ್ನು ಹಾಳು ಮಾಡುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಒಮ್ಮೆ ಕಾಣಿಸಿಕೊಳ್ಳುವ ಕಣ್ಣಿನ ಕಲೆಗಳನ್ನು ತೆಗೆಯುವುದು ಸುಲಭವಲ್ಲ.
ಇದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಳಸುವ ಗ್ರೀನ್ ಟೀ ನಿಮ್ಮ ಕಣ್ಣಿನ ಕಪ್ಪು ಕಲೆಯನ್ನು ತೆಗೆದುಹಾಕಲು ನೆರವಾಗಲಿದೆ.
ಗ್ರೀನ್ ಟೀ ಬ್ಯಾಗನ್ನು ನೀರು ಅಥವಾ ರೋಸ್ ವಾಟರ್ ನಲ್ಲಿ 2-3 ನಿಮಿಷ ನೆನೆಸಿಡಿ. ನಂತ್ರ ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಗ್ರೀನ್ ಟೀ ಬ್ಯಾಗನ್ನು ಸುಮಾರು 10 ನಿಮಿಷಗಳ ಕಾಲ ಡಾರ್ಕ್ ಸರ್ಕಲ್ ಇರುವ ಜಾಗದಲ್ಲಿ ಇಡಿ. ಹೀಗೆ ಮಾಡುವುದ್ರಿಂದ ನಿಮ್ಮ ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ.
ನಿಯಮಿತವಾಗಿ ನೀವು ಇದನ್ನು ಮಾಡುವುದ್ರಿಂದ ಕಪ್ಪು ಕಲೆ ಕೂಡ ಕಡಿಮೆಯಾಗುತ್ತದೆ. ಕಪ್ಪು ಕಲೆಗಳಿಗೆ ಮಾತ್ರವಲ್ಲ ಮೊಡವೆಗಳಿಗೂ ಗ್ರೀನ್ ಟೀ ಬೆಸ್ಟ್. ಗ್ರೀನ್ ಟೀ ಬ್ಯಾಗನ್ನು ಮೊಡವೆಯಿರುವ ಜಾಗದಲ್ಲಿ ಇಟ್ಟುಕೊಂಡ್ರೆ ಮೊಡವೆ ಕಡಿಮೆಯಾಗುತ್ತದೆ.
ಎಣ್ಣೆಯುಕ್ತ ಚರ್ಮವುಳ್ಳವರಿಗೆ ಗ್ರೀನ್ ಟೀ ಬ್ಯಾಗ್ ಪ್ರಯೋಜನಕಾರಿ. ಟೀ ಬ್ಯಾಗನ್ನು ನೀರಿನಲ್ಲಿ ಅದ್ದಿ ನಂತ್ರ ಮುಖದ ಮೇಲೆ ಇಟ್ಟುಕೊಳ್ಳಬೇಕು. ನಾಲ್ಕರಿಂದ ಐದು ಬ್ಯಾಗನ್ನು ಒಮ್ಮೆ ಬಳಸಬಹುದು.