alex Certify ʼಗ್ಯಾಸ್ಟ್ರಿಕ್‌ʼ ಸಮಸ್ಯೆಗೆ ವೈದ್ಯರ ವಿಲಕ್ಷಣ ಚಿಕಿತ್ಸೆ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗ್ಯಾಸ್ಟ್ರಿಕ್‌ʼ ಸಮಸ್ಯೆಗೆ ವೈದ್ಯರ ವಿಲಕ್ಷಣ ಚಿಕಿತ್ಸೆ; ವಿಡಿಯೋ ವೈರಲ್

WATCH: This Doctor's Bizarre Way of 'Curing' Gas Has the Netizens in Splits

ವೈದ್ಯರೊಬ್ಬರು ತನ್ನ ರೋಗಿಯನ್ನು ಹೊಟ್ಟೆನೋವಿನಿಂದ ಗುಣಪಡಿಸುವ ಚಿಕಿತ್ಸಾ ವಿಧಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.

ಟ್ವಿಟ್ಟರ್ ಹ್ಯಾಂಡಲ್ ನೈಟ್ ರೈಡರ್‌ ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿ, ವೈದ್ಯರು ತನ್ನ ರೋಗಿಗೆ ಮರದ ಕೋಲಿನಿಂದ ಹೊಡೆಯುವುದನ್ನು ಕಾಣಬಹುದು. ಅವರು ರೋಗಿಯ ಹೊಟ್ಟೆಗೆ ಹೊಡೆಯುವಾಗ “ಗ್ಯಾಸ್ ಲಾಕ್” ಎನ್ನುತ್ತಾರೆ. ನಂತರ, ಕೆಲವೇ ಸೆಕೆಂಡುಗಳಲ್ಲಿ, ಅವರು ರೋಗಿಯ ಹೊಟ್ಟೆ ಮೇಲೆ ತಮ್ಮ ಕೈಗಳನ್ನು ಬಡಿದು “ಗ್ಯಾಸ್ ಖತಮ್” ಎಂದು ಹೇಳುತ್ತಾರೆ.

ವೈದ್ಯರು ಮೈಕ್ರೊಫೋನ್ ಧರಿಸಿದ್ದು, ಅವರು ನೋಡುಗರ ಗಮನ ಸೆಳೆಯಲು ಈ ತಂತ್ರವನ್ನು ಅನುಸರಿಸಿದ್ದಾರೆನ್ನಲಾಗಿದೆ.

ಇದನ್ನು ಕಂಡ ನೆಟ್ಟಿಗರಲ್ಲಿ ಎರಡು ಬಣಗಳಾಗಿದ್ದು ಪರ – ವಿರೋಧದ ಅಭಿಪ್ರಾಯ ಬಂದಿದೆ, ಕೆಲವರು ಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...