ಆಧುನಿಕ ಸಮಾಜದಲ್ಲಿ ಗರ್ಭನಿರೋಧಕ ಮಾತ್ರೆ ಬಳಕೆ ಹೊಸ ವಿಚಾರವಲ್ಲ. ಇದರಿಂದ ಸಾಕಷ್ಟು ಅಡ್ಡ ಪರಿಣಾಮಗಳಿವೆ ಎಂಬುದನ್ನು ತಿಳಿದಿದ್ದರೂ ಇದರ ಬಳಕೆಯಲ್ಲಿ ಇಳಿಕೆಯಾಗಿಲ್ಲ. ಆರೋಗ್ಯ ತಜ್ಞರು ಇದನ್ನು ಮಿತಿಮೀರಿ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ಗರ್ಭ ನಿರೋಧಕದ ಅನಿಯಮಿತ ಸೇವನೆಯಿಂದ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚಿದೆಯಂತೆ. ಧೂಮಪಾನದ ಚಟ, ರಕ್ತದೊತ್ತಡ, ಮಧುಮೇಹದ ಸಮಸ್ಯೆ ಕಾಡುತ್ತದೆಯಂತೆ.
ಗರ್ಭನಿರೋಧಕ ಮಾತ್ರೆ ಸೇವಿಸುವ ಮಹಿಳೆಯರಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತದೆಯಂತೆ. ಮೆದುಳು ಹಾಗೂ ರಕ್ತನಾಳಗಳಲ್ಲಿ ರಕ್ತದೊತ್ತಡ ಹೆಪ್ಪುಗಟ್ಟುತ್ತದೆಯಂತೆ. ಗರ್ಭನಿರೋಧಕ ಮಾತ್ರೆಯ ಸೇವನೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗಲಿದ್ದು, ತಕ್ಷಣ ಚಿಕಿತ್ಸೆ ಪಡೆಯುವಂತೆ ತಜ್ಞರು ಸಲಹೆ ನೀಡಿದ್ದಾರೆ.