ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ಸೀಫುಡ್ ಸೇವನೆ ಹುಟ್ಟುವ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅಧ್ಯಯನದ ವರದಿ ತಿಳಿಸಿದೆ.
ಮಕ್ಕಳ ನರ ರಚನೆ ಹಾಗೂ ಮಿದುಳಿನ ಬೆಳವಣಿಗೆಗಳು ಗರ್ಭಾವಸ್ಥೆಯಲ್ಲಿ ಆರಂಭವಾಗಲಿದ್ದು, ಒಮೆಗಾ-3 ಪೋಷಕಾಂಶಗಳ ಸೇವನೆ ಈ ಪ್ರಕ್ರಿಯೆಯಲ್ಲಿ ಬಹು ದೊಡ್ಡ ಪಾತ್ರ ನಿರ್ವಹಿಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಪೋಷಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಸೀಫುಡ್ ಹೊಂದಿರುತ್ತದೆ. ವಿವಿಧ ಬಗೆಯ ಮೀನುಗಳ ಸೇವನೆ ಮಾಡಿದ ತಾಯಂದಿರ ಮಕ್ಕಳ ಬೆಳವಣಿಗೆ ವಿವಿಧ ರೀತಿಯ ಮಾನದಂಡಗಳ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿರುವುದಾಗಿ ಅಧ್ಯಯನದ ವೇಳೆ ಕಂಡು ಬಂದಿರುವುದಾಗಿ ವರದಿ ತಿಳಿಸಿದೆ.