![](https://kannadadunia.com/wp-content/uploads/2020/08/garike_grass_a.jpg)
ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ. ಸಂಜೀವಿನಿ ಎಂದೂ ಕರೆಸಿಕೊಳ್ಳುವ ಗರಿಕೆ ಅತ್ಯಮೂಲ್ಯ ಗಿಡಮೂಲಿಕೆಗಳಲ್ಲಿ ಒಂದು. ಗರಿಕೆ ಹುಲ್ಲಿನ ತಾಜಾ ರಸ ಸೇವನೆಯಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಬೊಜ್ಜು ನಿವಾರಿಸಿಕೊಳ್ಳಬಹುದು.
ವಾತ, ಪಿತ್ತ, ಕಫ ಇವುಗಳ ಸಮಸ್ಯೆಯಿಂದ ದೂರವಿರಬಹುದು. ಏಡ್ಸ್, ಕ್ಯಾನ್ಸರ್, ಟ್ಯೂಮರ್ ಮುಂತಾದ ಮಾರಕ ವ್ಯಾಧಿಗಳನ್ನೂ ದೂರ ಮಾಡಬಹುದು.
ಗರಿಕೆ ರಸ ಸೇವನೆಯಿಂದ ಕಣ್ಣಿನ ದೃಷ್ಟಿ ಚುರುಕಾಗಿ ಹೊಳಪು ಪಡೆದುಕೊಳ್ಳುತ್ತದೆ. ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ. ಶೀತದಿಂದ ಮುಕ್ತಿ ಸಿಗುತ್ತದೆ.
ಹಲ್ಲು ನೋವು, ಕಿವಿಸೋರುವಿಕೆಯಿಂದ ಮುಕ್ತಿ ದೊರೆಯುತ್ತದೆ. ಮಧುಮೇಹಿಗಳು ಇದರ ಕಷಾಯಕ್ಕೆ ಸಿಹಿ ಸೇರಿಸದೆ ಕುಡಿಯಬೇಕು. ಮೊಡವೆ ಸಮಸ್ಯೆಗೂ ಇದು ಮುಕ್ತಿ ನೀಡುತ್ತದೆ.
ಗರಿಕೆ ಎಲೆಯ ರಸ ತೆಗೆದು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಕೂದಲ ಬುಡಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದ ತಲೆಹೊಟ್ಟು, ತುರಿಕೆ ಕಡಿಮೆಯಾಗಿ ಕೂದಲು ಸೊಂಪಾಗಿ ಉದ್ದಕ್ಕೆ ಬೆಳೆಯುತ್ತದೆ.