ತೆಲಂಗಾಣ ಪೊಲೀಸರಿಗೆ ಕ್ಯಾಚ್ ಮೀ ಇಫ್ ಯೂ ಕ್ಯಾನ್(ನಿಮ್ಮಿಂದ ಆದರೆ ನನ್ನನ್ನು ಹಿಡಿಯಿರಿ) ಎಂದು ಗರ್ವದಿಂದ ಸವಾಲೆಸೆದಿದ್ದ, ಅಂತರರಾಜ್ಯ ಕಳ್ಳನನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದಾರೆ.
ಜೈಪುರ ಮೂಲದ ಸತ್ಯೇಂದ್ರ ಸಿಂಗ್ ಶೇಖಾವತ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಈತ ಹೈ ಎಂಡ್ ಕಾರುಗಳನ್ನು ಕದ್ದು ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಶೇಖಾವತ್, ದೇಶಾದ್ಯಂತ ನೂರಾರು ಕಾರುಗಳವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಈತ ತೆಲಂಗಾಣದ ಬಂಜಾರ ಹಿಲ್ಸ್ ಬಳಿಯಿಂದ ಐಷಾರಾಮಿ ಕಾರ್ ಒಂದನ್ನು ಕದ್ದೊಯ್ಯುತ್ತಿದ್ದ. ಈ ಸಂದರ್ಭದಲ್ಲಿ ಈತನನ್ನು ಪೊಲೀಸರು ಚೇಸ್ ಮಾಡುತ್ತಿದ್ದರು. ಆಗಲೇ ಈತ, ಕ್ಯಾಚ್ ಮೀ ಇಫ್ ಯೂ ಕ್ಯಾನ್ ಎಂದು ಪೊಲೀಸರಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದನಂತೆ.
SSLC, PUC ಪರೀಕ್ಷೆ; ಕಡ್ಡಾಯ ಹಾಜರಾತಿ ನಿಯಮವನ್ನು ಸಡಿಲಿಸಲು ಶಿಕ್ಷಣ ಇಲಾಖೆ ನಿರ್ಧಾರ
ಶೇಖಾವತ್ ಮೇಲೆ ಕನ್ನಡ ಸಿನಿಮಾ ನಿರ್ಮಾಪಕ ಮಂಜುನಾಥ್ ಎಂಬವವರ ಹೈ-ಎಂಡ್ ಕಾರನ್ನ ಎಗರಿಸಿದ್ದಾನೆ ಎಂಬ ಆರೋಪವಿದೆ. ಈತ ಐಷಾರಾಮಿ ಕಾರುಗಳ ಡಿವೈಸನ್ನು ಹ್ಯಾಕ್ ಮಾಡಿ ಕಾರನ್ನ ಹೊತ್ತೊಯ್ಯುತ್ತಿದ್ದ. ಕದ್ದ ಕಾರುಗಳನ್ನ ಡ್ರಗ್ಸ್ ಮಾಫಿಯಾ ಲೀಡರ್ ಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಧ್ಯ ಈ ಸಿನಿ ಸ್ಟೈಲ್ ಕಳ್ಳನನ್ನು ಬೆಂಗಳೂರಿನಲ್ಲಿ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ನಾಲ್ಕು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.