ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದ್ರೆ ಮುಂದೇನು ಅನ್ನೋ ಯೋಚನೆ ಎಂತವರನ್ನು ಕಾಡಬಹುದು, ಆದ್ರೆ ಅಮೇರಿಕಾದಲ್ಲಿ ಈ ಪ್ರಶ್ನೆಗೆ ಸಿಗೊ ಉತ್ತರ ಮನೆಯಲ್ಲಿರಿ ಎಂಬುದು. ಮನೆಯಲ್ಲೇ ಇದ್ದು, ಸೋಂಕು ಇತರರಿಗೆ ಹರಡುವುದನ್ನ ತಪ್ಪಿಸಿ. ನಿಮ್ಮ ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ನಿಮ್ಮ ಸಂಪರ್ಕದಲ್ಲಿದ್ದವರಿಗೆ ತಿಳಿಸಿ. ಉಸಿರಾಟದ ತೊಂದರೆ ಅಥವಾ ಇತರ ಗಂಭೀರ ರೋಗಲಕ್ಷಣ ಕಂಡುಬಂದರೆ, ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ. ಓಮಿಕ್ರಾನ್ ರೂಪಾಂತರದ ಆಗಮನದಿಂದ ಕೋವಿಡ್-19 ಸೋಂಕು ಹೆಚ್ಚುತ್ತಿದೆ.
ಅಮೇರಿಕದಲ್ಲಿ ಕೇಸ್ ಗಳು ಹೆಚ್ಚುತ್ತಿರುವುದರಿಂದ ಸಾಕಷ್ಟು ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ. ಪಾಸಿಟಿವ್ ಬಂದವರು 10 ದಿನಗಳವರೆಗೆ ಮನೆಯಲ್ಲಿಯೇ, ಪ್ರತ್ಯೇಕವಾಗಿರಲು ಶಿಫಾರಸು ಮಾಡಲಾಗಿದೆ. ಇತರ ಜನರೊಂದಿಗೆ ವಾಸಿಸುವವರು, ಪ್ರತ್ಯೇಕ ಕೋಣೆಯಲ್ಲಿ ಐಸೋಲೇಟ್ ಆಗಿ, ಸಾಧ್ಯವಾದರೆ ಪ್ರತ್ಯೇಕ ಸ್ನಾನಗೃಹವನ್ನು ಬಳಸಿ ಎಂದು ತಿಳಸಲಾಗಿದೆ. ಇತರರೊಂದಿಗೆ ಸಂಪರ್ಕಕ್ಕೆ ಬಂದಾಗ ಮಾಸ್ಕ್ ಧರಿಸಿ.
ವಿಡಿಯೋ ಮಾಡಿಟ್ಟು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ
ಆತಂಕಕಾರಿ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸಿದರೆ ನೀವು ಕಾಳಜಿ ವಹಿಸಬೇಕು. ಆದರೆ ಹೃದ್ರೋಗಗಳು, ಮಧುಮೇಹ ಮತ್ತು ದುರ್ಬಲಗೊಂಡಿರುವ ಅನೇಕ ಜನರಿದ್ದಾರೆ, ಅವರು ಸೌಮ್ಯವಾದ ಅನಾರೋಗ್ಯವನ್ನು ಹೊಂದಿದ್ದರೂ ಸಹ ಕಾಳಜಿಯನ್ನು ಪಡೆಯಬೇಕು, ಏಕೆಂದರೆ ಸೋಂಕಿನಿಂದ ಗಂಭೀರ ಲಕ್ಷಣಗಳು ಉಲ್ಬಣವಾಗುವ ಅಪಾಯವಿದೆ. ನಿಮ್ಮ ಪರೀಕ್ಷೆಯ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಬೇಕು, ಅವರು ನಿಮ್ಮ ಪರಿಸ್ಥಿತಿ ಮತ್ತು ಆರೋಗ್ಯವನ್ನು ನೋಡಿ ಔಷಧಿಗಳನ್ನು ಶಿಫಾರಸು ಮಾಡಬಹುದು. ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ನೀವೇ ಕಾಳಜಿ ವಹಿಸಿ ಎಂದು ವ್ಯಾಂಡರ್ಬಿಲ್ಟ್ ಯೂನಿವರ್ಸಿಟಿಯ ವೈದ್ಯ ಡಾ ವಿಲಿಯಮ್ ತಿಳಿಸಿದ್ದಾರೆ.