ಬೆಂಗಳೂರು: ಕೋವಿಡ್ ನಿಂದ ಗುಣಮುಖರಾಗಿ ನೆಗೆಟಿವ್ ಬಂದ ಬಳಿಕವೂ ಹಲವರಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಪ್ರಮುಖವಾಗಿ ಅಂತಹ ಆರೋಗ್ಯ ಸಮಸ್ಯೆಗಳು ಯಾವವು ? ಮನೆಯಲ್ಲಿಯೇ ಇದ್ದು ಅಂತಹ ಸಮಸ್ಯೆಗಳಿಗೆ ಕಂಡುಕೊಳ್ಳಬಹುದಾದ ಪರಿಹಾರವೇನು ಎಂಬ ಬಗ್ಗೆ ಮಹತ್ವದ ಸಲಹೆಗಳನ್ನು ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ.
ಅಡುಗೆ ಸಿಲಿಂಡರ್ ಬೇಗ ಖಾಲಿಯಾಗ್ತಿದೆಯಾ…? ಹೀಗೆ ಮಾಡಿ
ಕೋವಿಡ್ ನಂತರದಲ್ಲಿ ಶೇ.80 ರಷ್ಟು ಜನರು ಖಿನ್ನತೆ, ಅನಗತ್ಯ ಆತಂಕ, ಅತಿಯಾದ ಸುಸ್ತು, ಮೌತ್ ಅಲ್ಸರ್ ಹೀಗೆ ಅನೇಕ ರೀತಿಯ ಸಮಸ್ಯೆಗಳಿಂದ ಬಳುತ್ತಿದ್ದಾರೆ. ಇಂತಹ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಇದ್ದು ಪರಿಹಾರ ಕಂಡುಕೊಳ್ಳಬಹುದು. ಕೊರೊನಾ ಪಾಸಿಟಿವ್ ಎಂದಾಕ್ಷಣ ಜನರು ಆತಂಕಕ್ಕೀಡಾಗುವವರೇ ಹೆಚ್ಚು.
ಆರ್ಥಿಕ ಸಮಸ್ಯೆ, ಆಸ್ಪತ್ರೆಗಳ ಖರ್ಚು, ಭವಿಷ್ಯದ ಬಗ್ಗೆ ಚಿಂತೆ ಇವು ಡಿಪ್ರೆಶನ್ ಗೆ ಕಾರಣವಾಗುತ್ತಿದೆ. ಇಂತಹ ಸಮಸ್ಯೆ ಕಂಡುಬಂದರೆ ಕುಟುಂಬದ ಸದಸ್ಯರು ವ್ಯಕ್ತಿಯಲ್ಲಿ ಧೈರ್ಯ ತುಂಬುವುದು ಮುಖ್ಯ. ಪದೇ ಪದೇ ಅವರಲ್ಲಿ ಧೈರ್ಯ ತುಂಬಿ ಹಾಗೂ ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆದು ಕೌನ್ಸೆಲಿಂಗ್ ಪಡೆದುಕೊಳ್ಳುವುದು ಉತ್ತಮ.
ಮಾನವೀಯತೆ ಮೆರೆದ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಜ್ವರ, ಅತಿಯಾದ ಸುಸ್ತು, ಕೆಮ್ಮು, ಸ್ಕಿನ್ ರ್ಯಾಷಸ್, ಮೌತ್ ಅಲ್ಸರ್ ನಂತಹ ಸಮಸ್ಯೆಗಳು ಕಂಡುಬರುತ್ತಿದೆ. ಜ್ವರ, ಕೆಮ್ಮು, ನೆಗಡಿ ಬಂದಲ್ಲಿ ಸಾಮಾನ್ಯ ಔಷಧಿ ಸೇವಿಸಿದರೆ ಸಾಕು. ಹಣ್ಣು, ಎಳನೀರು ಹೆಚ್ಚು ಹೆಚ್ಚು ಸೇವಿಸಿ ದೇಹವನ್ನು ತಂಪಾಗಿಡುವುದರಿಂದ ಮೌತ್ ಅಲ್ಸರ್ ನಂತಹ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಡಾ. ರಾಜು ಸಲಹೆ ನೀಡಿದ್ದಾರೆ.