ಬಾದ್ರಪದ ತಿಂಗಳ ಕೃಷ್ಣ ಪಕ್ಷದ ಅಷ್ಠಮಿಯಂದು ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತದೆ. ಇಂದು ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ಮನೆ ಮಾಡಿದೆ. ಭಗವಂತ ವಿಷ್ಣುವಿನ 8 ನೇ ಅವತಾರ ಕೃಷ್ಣನ ಪೂಜೆಯಲ್ಲಿ ಭಕ್ತರು ನಿರತರಾಗಿದ್ದಾರೆ. ದೇವಸ್ಥಾನಗಳಲ್ಲಿ ಪೂಜೆ, ಪ್ರಾರ್ಥನೆ ಶುರುವಾಗಿದೆ.
ಹಿಂದೂ ಧರ್ಮದಲ್ಲಿ ಕೃಷ್ಣ ಜನ್ಮಾಷ್ಠಮಿಗೆ ಮಹತ್ವದ ಸ್ಥಾನವಿದೆ. ಈ ದಿನ ಕೃಷ್ಣನ ಆರಾಧನೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಲಕ್ಷ್ಮಿ-ಕೃಷ್ಣನಿಗೆ ಸಂಬಂಧಿಸಿದ ಒಂದು ಕೆಲಸವನ್ನು ಕೃಷ್ಣ ಜನ್ಮಾಷ್ಠಮಿಯ ರಾತ್ರಿ ಮಾಡಿದ್ರೆ ಸಕಲ ಸುಖ-ಸಮೃದ್ಧಿ ಪ್ರಾಪ್ತಿಯಾಗಲಿದೆ.
ಶಂಖಕ್ಕೆ ಹಾಲನ್ನು ಹಾಕಿ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ. ಅಭಿಷೇಕದ ನಂತ್ರ ತಾಯಿ ಲಕ್ಷ್ಮಿ ಪೂಜೆ ಮಾಡಬೇಕು. ಭಗವಂತ ಕೃಷ್ಣ ಹಾಗೂ ಲಕ್ಷ್ಮಿ ಪೂಜೆ ಮಾಡಿದ್ರೆ ಆರ್ಥಿಕ ವೃದ್ಧಿಯಾಗಲಿದೆ.
ಕೃಷ್ಣ ಜನ್ಮಾಷ್ಠಮಿಯಂದು ಬಡವರಿಗೆ ದಾನ ಮಾಡಿದ್ರೂ ಫಲ ಪ್ರಾಪ್ತಿಯಾಗಲಿದೆ. ಬಡವರಿಗೆ ಧಾನ್ಯ ಹಾಗೂ ಹಣ್ಣನ್ನು ದಾನ ನೀಡಬೇಕು. ಸಾಧ್ಯವಾದ್ರೆ ಜ್ಯೋತಿಷ್ಯರ ಸಲಹೆ ಪಡೆದು ಎಷ್ಟು ದಾನ ನೀಡಬೇಕೆಂಬುದನ್ನು ತಿಳಿದುಕೊಳ್ಳಿ.
ಭಗವಂತ ಕೃಷ್ಣನ ಪೂಜೆ ಮಾಡುವ ಮೊದಲು ನಾಣ್ಯಗಳನ್ನು ಮೂರ್ತಿ ಬಳಿ ಇಡಿ. ನಂತ್ರ ಪೂಜೆ ಮಾಡಿ. ಪೂಜೆಯಾದ ಮೇಲೆ ನಾಣ್ಯವನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ. ಹೀಗೆ ಮಾಡಿದ್ರೆ ಲಕ್ಷ್ಮಿ ಕೃಪೆ ನಿಮ್ಮ ಮೇಲಿರುತ್ತದೆ.
ಕೃಷ್ಣ ಜನ್ಮಾಷ್ಠಮಿಯ ಸಂಜೆ ತುಳಸಿ ಪೂಜೆ ಮಾಡಿ. ತುಪ್ಪದ ದೀಪ ಹಚ್ಚಿ ಓಂ ವಸುದೇವಾಯ ನಮಃ ಮಂತ್ರವನ್ನು ಜಪಿಸಿ. ಇದು ಆರ್ಥಿಕ ಸಮಸ್ಯೆ ದೂರ ಮಾಡಿ ಮನೆಯಲ್ಲಿ ಸಂಪತ್ತು ನೆಲೆಸುವಂತೆ ಮಾಡುತ್ತದೆ.