ಹೆಚ್ಚಿನವರು ಮೇಕಪ್ ಮಾಡುವಾಗ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಲು ಕೃತಕ ರೆಪ್ಪೆ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ರೆಪ್ಪೆಗೂದಲನ್ನು ಬಳಸುತ್ತಿದ್ದಾರೆ. ಇದು ನಿಮ್ಮ ನೋಟವನ್ನು ಆಕರ್ಷಕವಾಗಿ ಮಾಡುತ್ತದೆ ನಿಜ. ಆದರೆ ಅನೇಕ ಅಡ್ಡಪರಿಣಾಮವನ್ನುಂಟು ಮಾಡುತ್ತದೆ.
ಯಾವಾಗಲೂ ರೆಪ್ಪೆಗೂದಲನ್ನು ಬಳಸುತ್ತಿದ್ದರೆ ಅದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ತುರಿಕೆಗೆ ಕಾರಣವಾಗುತ್ತದೆ. ಯಾಕೆಂದರೆ ರೆಪ್ಪೆಗೂದಲಿನ ಪ್ರದೇಶವು ತುಂಬಾ ಸೂಕ್ಷ್ಮವಾಗಿದೆ. ಇದರ ಮೇಲೆ ರಾಸಾಯನಿಕ ಮಿಶ್ರಿತ ರೆಪ್ಪೆಗೂದಲನ್ನು ಅಂಟಿಸುವುದರಿಂದ ಅಲರ್ಜಿಗೆ ಕಾರಣವಾಗಬಹುದು.
ರೆಪ್ಪೆಗೂದಲನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಇದು ಸೋಂಕನ್ನು ಉಂಟುಮಾಡುತ್ತದೆ.
ಅಪ್ಪು ಕನಸಿನ ಟೈಟಲ್ ಟೀಸರ್ ಬಿಡುಗಡೆಯ ದಿನಾಂಕ ಪ್ರಕಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್
ಇದನ್ನು ಕಣ್ಣಿನ ರೆಪ್ಪೆಗಳ ಮೇಲೆ ಅಂಟಿಸುವುದರಿಂದ ಇದು ನೈಸರ್ಗಿಕ ರೆಪ್ಪೆಗೂದಲಿನ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಇದರಿಂದ ನೈಸರ್ಗಿಕ ಕೂದಲು ಉದುರಿ ಹೋಗುತ್ತದೆ.
ಕೃತಕ ರೆಪ್ಪೆಗೂದಲನ್ನು ಬಳಸುವುದರಿಂದ ಅದರ ಅಂಟುಗಳಲ್ಲಿ ಫಾರ್ಮಾಲ್ಡಿಹೈಡ್ ಇರುತ್ತದೆ. ಇದು ಕಣ್ಣಿನ ರೆಪ್ಪೆಗಳ ಮೇಲೆ ಪರಿಣಾಮ ಬೀರುವುದರಿಂದ ಕಣ್ಣುಗಳು ಊದಿಕೊಳ್ಳುತ್ತದೆ. ಹಾಗೇ ಇದರಿಂದ ಕಣ್ಣುಗಳು ಡ್ರೈ ಆಗುತ್ತದೆ. ಕಣ್ಣೀರಿನ ನಾಳಗಳಲ್ಲಿ ತೇವಾಂಶದ ಕೊರತೆಯಾಗಿ ಕಣ್ಣುಗಳು ಒಣಗುತ್ತವೆ.