ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಅದ್ರ ಬಗ್ಗೆ ಸರಿಯಾದ ಗಮನ ನೀಡದೆ ಹೋದ್ರೆ ಕೂದಲು ಪೂರ್ತಿ ಉದುರಿ, ಬೋಳಾಗಬೇಕಾಗುತ್ತದೆ. ತಲೆ ಹೊಟ್ಟು, ಬಿಳಿ ಕೂದಲು ಸೇರಿದಂತೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಸಾಮಾನ್ಯವಾಗಿ ನಾವು ಶಾಂಪೂವನ್ನು ಕೂದಲಿಗೆ ಬಳಸ್ತೇವೆ. ಕೂದಲು ತೊಳೆಯುವಾಗ ಎರಡು ಬಾರಿ ಶಾಂಪೂ ಬಳಸುವಂತೆ ಸಲಹೆ ನೀಡಲಾಗುತ್ತದೆ.
ಮೊದಲ ಸಲ ಶಾಂಪೂ ಬಳಕೆಯಿಂದ ಕೂದಲಿನಲ್ಲಿನ ಎಣ್ಣೆ ಜಿಡ್ಡಿನಂಶ ಮತ್ತು ಕೊಳೆ ತೊಳೆದು ಹೋಗುತ್ತದೆ. ನಂತರ ಎರಡನೇ ಬಾರಿಗೆ ಕೂದಲು ಸ್ವಚ್ಛವಾಗುತ್ತದೆ.
ಶಾಂಪೂದಲ್ಲಿರುವ ರಾಸಾಯನಿಕಗಳು ನಿಮ್ಮ ಕೂದಲಿಗೆ ಹಾನಿ ಮಾಡುತ್ತದೆ. ಹಾಗಾಗಿ ನಮ್ಮ ಕೂದಲಿಗೆ ಅಗತ್ಯವಿರುವಷ್ಟು ಮಾತ್ರ ಬಳಸಿದರೆ ಕೂದಲು ಚೆನ್ನಾಗಿ ಸ್ವಚ್ಛವಾಗುತ್ತದೆ. ಕೂದಲಿನಲ್ಲಿರುವ ಎಣ್ಣೆ ಮತ್ತು ಕೊಳೆ ನಿವಾರಣೆಯಾಗುತ್ತದೆ. ಆದಷ್ಟು ರಾಸಾಯನಿಕಗಳು ಕಡಿಮೆ ಇರುವ ಶ್ಯಾಂಪು ಬಳಸುವುದು ಒಳ್ಳೇದು.
ಮೊದಲು ಕೂದಲನ್ನು ಸೋಪಿನಿಂದ ಸ್ವಚ್ಛಗೊಳಿಸಬೇಕು. ನಂತರ ಕೂದಲಿಗೆ ಶಾಂಪೂ ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು.