ಸುರಕ್ಷಿತವಾದ ಸಂಭೋಗಕ್ಕೆ ಕಾಂಡೋಮ್ ಬಳಸುವುದು ಅತ್ಯಂತ ಸೂಕ್ತ. ಆದ್ರೆ ಎಷ್ಟೋ ಬಾರಿ ಕಾಂಡೋಮ್ ಹರಿದು ಪೇಚಿಗೀಡಾಗುವ ಸಂದರ್ಭಗಳೂ ಎದುರಾಗುತ್ತವೆ. ಕಾಂಡೋಮ್ ಹರಿಯದಂತೆ ತಡೆಯಲು ಕೆಲವು ಟಿಪ್ಸ್ ಇಲ್ಲಿವೆ.
ಅಧಿಕ ಉಷ್ಣಾಂಶವಿರುವ ಕಡೆ ಕಾಂಡೋಮ್ ಗಳನ್ನು ಶೇಖರಿಸಿಡಬೇಡಿ. ಸೂರ್ಯನ ಬೆಳಕು ಬೀಳದ, ತಂಪಾದ ಕತ್ತಲ ಜಾಗದಲ್ಲಿ ಅವುಗಳನ್ನು ಇಡಿ.
ತೈಲ ಆಧಾರಿತ ಲೂಬ್ರಿಕೆಂಟ್ ಗಳನ್ನು ಬಳಸದೇ ಇರುವುದು ಉತ್ತಮ. ಕೊಬ್ಬರಿ ಎಣ್ಣೆ, ವ್ಯಾಸಲಿನ್ ಅಥವಾ ಇತರೆ ಲೋಶನ್ ಬಳಸುವುದರಿಂದ ಕಾಂಡೋಮ್ ಹರಿದು ಹೋಗುವ ಸಾಧ್ಯತೆ ಇರುತ್ತದೆ.
ಚಳಿಗಾಲದಲ್ಲಿ ಅಂಗಿಯ ಮೇಲೊಂದು ಅಂಗಿ ಧರಿಸುವುದರಲ್ಲಿ ಅರ್ಥವಿದೆ. ಆದ್ರೆ ಅಪ್ಪಿತಪ್ಪಿಯೂ ಒಮ್ಮೆಲೇ ಡಬಲ್ ಕಾಂಡೋಮ್ ಧರಿಸಬೇಡಿ. ಒಂದು ಬಾರಿ ಒಂದೇ ಕಾಂಡೋಮ್ ಅನ್ನು ಧರಿಸಬೇಕು. ಅದೇ ರೀತಿ ಅದನ್ನು ವಿನ್ಯಾಸಗೊಳಿಸಲಾಗಿದೆ.
ಕಾಂಡೋಮ್ ಬಳಸುವ ವಿಧಾನವನ್ನು ಸರಿಯಾಗಿ ತಿಳಿದುಕೊಳ್ಳಿ. ಸರಿಯಾದ ಕ್ರಮದಲ್ಲಿ ಅದನ್ನು ಧರಿಸೇ ಇದ್ದಲ್ಲಿ ಸಂಭೋಗದ ವೇಳೆ ಹರಿದು ಅವಾಂತರವಾಗುವ ಸಾಧ್ಯತೆ ಹೆಚ್ಚು.
ಕೇವಲ ಕಾಂಡೋಮ್ ಬಳಸುವುದು ಆರಾಮದಾಯಕವಲ್ಲ. ಅದರೊಂದಿಗೆ ಲ್ಯೂಬ್ ಬಳಸಿದರೆ ಹರಿದು ಹೋಗುವ ಸಾಧ್ಯತೆ ಕಡಿಮೆಯಾಗಿರುತ್ತದೆ. ಲ್ಯೂಬ್ ಬಳಸದೇ ಇದ್ದಲ್ಲಿ ಅನಾನುಕೂಲತೆಗಳಾಗಬಹುದು.
ನಿಮಗೆ ಸೂಕ್ತವಾದ ಗಾತ್ರದ ಕಾಂಡೋಮ್ ಗಳನ್ನೇ ಖರೀದಿಸಿ. ಅಗ್ಗದ ಬೆಲೆಗೆ ಸಿಗ್ತಿದೆ ಅನ್ನೋ ಕಾರಣಕ್ಕೆ ಯಾವ್ಯಾವುದೋ ಕಾಂಡೋಮ್ ಗಳನ್ನು ಕೊಳ್ಳುವುದು ಸೂಕ್ತವಲ್ಲ. ಕಾಂಡೋಮ್ ತುಂಬಾ ಚಿಕ್ಕದಾಗಿದ್ದರೆ ಹರಿದು ಹೋಗಬಹುದು.