ನಮ್ಮ ಸಮಾಜ ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ವಿಚಾರಗಳ ಬಗ್ಗೆ ಮಡಿವಂತಿಕೆ ಇದೆ. ಗುಪ್ತ ಸಮಸ್ಯೆ, ಗೊಂದಲಗಳ ಬಗ್ಗೆ ನೇರವಾಗಿ ಮಾತನಾಡಲು ಮುಜುಗರಪಡ್ತಾರೆ. ಇದರಿಂದ ಆಪತ್ತು ತಂದುಕೊಳ್ಳುತ್ತಾರೆ. ಕಾಂಡೋಮ್ ವಿಚಾರದಲ್ಲಿ ಕೂಡ ಮಡಿವಂತಿಕೆ ಇದೆ. ಮೆಡಿಕಲ್ ಶಾಪಿನಲ್ಲಿ ಈ ಬಗ್ಗೆ ಕೇಳಲು ಮುಜುಗರಪಡುವ ಜನರು ಇದರ ಬಗ್ಗೆ ನಿರ್ಲಕ್ಷ್ಯ ಮಾಡಿ, ಸಮಸ್ಯೆ ಮೈಮೇಲೆಳೆದುಕೊಳ್ತಾರೆ.
ಕಾಂಡೋಮ್ ಬಳಸುವ ಮುನ್ನ ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ಕಾಂಡೋಮ್ ಬಳಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಒಳ್ಳೆ ಕಂಪನಿಯ ಕಾಂಡೋಮ್ ಖರೀದಿ ಮಾಡಬೇಕು. ಕಾಂಡೋಮ್ ಬಳಕೆಯಿಂದ ಅಲರ್ಜಿ ಕಾಣಿಸಿಕೊಂಡರೆ ತಕ್ಷಣ ಬ್ರ್ಯಾಂಡ್ ಬದಲಾಯಿಸುವುದು ಒಳ್ಳೆಯದು.
ಬಳಸುವ ಮುನ್ನ ಕಾಂಡೋಮ್ ಮೇಲಿರುವ ಸೀಲ್ ಹಾಗೂ ದಿನಾಂಕವನ್ನು ಪರಿಶೀಲಿಸಿಕೊಳ್ಳಿ. ಎಕ್ಸ್ ಪೈರ್ ಆಗಿರುವ ಕಾಂಡೋಮ್ ಬಳಸಬೇಡಿ. ಜೇಬಿನಲ್ಲಿ, ಕಾರಿನಲ್ಲಿ ಹಾಗೂ ಪರ್ಸ್ ನಲ್ಲಿ ತುಂಬಾ ಸಮಯ ಇಡಬೇಡಿ. ತಣ್ಣಗಿನ ಅಥವಾ ಒಣ ಪ್ರದೇಶದಲ್ಲಿ ಕಾಂಡೋಮ್ ಇಡಬೇಕು. ಒಂದು ಕಾಂಡೋಮ್ ಒಂದೇ ಬಾರಿ ಬಳಸಿ. ಕಾಂಡೋಮ್ ಪ್ಯಾಕೆಟ್ಟನ್ನು ಮೂಗಿನ ಹತ್ತಿರ ತೆರೆಯಬೇಡಿ.