
ಸಂಭೋಗದ ಮೊದಲು ಪ್ರತಿಯೊಬ್ಬ ವ್ಯಕ್ತಿಯೂ ಲೈಂಗಿಕ ರಕ್ಷಣೆ ಬಗ್ಗೆ ತಿಳಿದಿರಬೇಕು. ಅನಪೇಕ್ಷಿತ ಗರ್ಭಧಾರಣೆ ಹಾಗೂ ಸೆಕ್ಸ್ ನಿಂದ ಹರಡುವ ರೋಗಗಳಿಂದ ತಪ್ಪಿಸಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಈ ಎರಡೂ ಸಮಸ್ಯೆಗೆ ಕಾಂಡೋಮ್ ಉತ್ತಮ ಪರಿಹಾರ. ಆದ್ರೆ ಕಾಂಡೋಮ್ ಬಳಕೆಯಲ್ಲೂ ಕೆಲವೊಂದು ಸಮಸ್ಯೆಗಳಿವೆ. ಅದಕ್ಕೆ ಪರಿಹಾರ ತಿಳಿದಿದ್ದರೆ ಒಳ್ಳೆಯದು.
ಸಂಭೋಗದ ವೇಳೆ ಕಾಂಡೋಮ್ ಹಾಳಾದ್ರೆ ತಕ್ಷಣ ಎಚ್ಚರಿಕೆಯಿಂದ ಕೆಲಸ ಮಾಡಿ. ಕಾಂಡೋಮ್ ಖರೀದಿ ಮೊದಲೇ ಅದ್ರ ಕೊನೆ ದಿನಾಂಕವನ್ನು ಪರೀಕ್ಷೆ ಮಾಡಿಕೊಳ್ಳಿ. ಕಾಂಡೋಮ್ ಹರಿದ ನಂತ್ರ ಬೇರೆ ಕಾಂಡೋಮ್ ಬಳಸಿ. ಅಗತ್ಯವೆನಿಸಿದ್ರೆ ಗರ್ಭ ನಿರೋಧಕ ಮಾತ್ರೆ ಸೇವನೆ ಒಳ್ಳೆಯದು. ಕಾಂಡೋಮನ್ನು ಹೆಚ್ಚು ತಣ್ಣನೆಯ ಹಾಗೂ ಹೆಚ್ಚು ಬೆಚ್ಚಗಿನ ಜಾಗದಲ್ಲಿ ಇಡಬೇಡಿ.
ಕಾಂಡೋಮ್ ಲೀಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಗರ್ಭಧಾರಣೆ ಹಾಗೂ ಸೋಂಕು ಹರಡಲು ಕಾರಣವಾಗುತ್ತದೆ. ಅಗತ್ಯಕ್ಕಿಂತ ದೊಡ್ಡ ಅಥವಾ ಚಿಕ್ಕ ಗಾತ್ರದ ಕಾಂಡೋಮ್ ಬಳಕೆ ಲೀಕ್ ಗೆ ಕಾರಣವಾಗುತ್ತದೆ. ಹಾಗಾಗಿ ಮುಂದಿನ ಬಾರಿ ಕಾಂಡೋಮ್ ಖರೀದಿ ವೇಳೆ ಗಾತ್ರದ ಬಗ್ಗೆ ಗಮನ ನೀಡಿ.
ಕಾಂಡೋಮ್ ಬಳಕೆ ವೇಳೆ ಸಂಗಾತಿ ಖಾಸಗಿ ಅಂಗಕ್ಕೆ ಅಂಟಿಕೊಳ್ಳುವ ಸಾಧ್ಯತೆಯಿರುತ್ತದೆ. ಅಂಗಕ್ಕಿಂತ ದೊಡ್ಡ ಗಾತ್ರದ ಕಾಂಡೋಮ್ ಖರೀದಿ ಇದಕ್ಕೆ ಕಾರಣವಾಗುತ್ತದೆ. ನಿಧಾನವಾಗಿ ಸಂಗಾತಿ ಖಾಸಗಿ ಅಂಗದಿಂದ ಕಾಂಡೋಮ್ ಹೊರ ತೆಗೆಯಲು ಪ್ರಯತ್ನ ಮಾಡಿ. ಸಂಗಾತಿಗೆ ನೋವಾದಲ್ಲಿ ತಕ್ಷಣ ಸ್ತ್ರಿರೋಗ ತಜ್ಞರನ್ನು ಭೇಟಿ ಮಾಡಿ.
ಕಾಂಡೋಮ್ ಬಳಕೆಯಿಂದ ಸಂಭೋಗದ ಸುಖ ಸರಿಯಾಗಿ ಸಿಗುವುದಿಲ್ಲ ಎನ್ನುವವರಿದ್ದಾರೆ. ಅಂಥವರು ಮಾರುಕಟ್ಟೆಯಲ್ಲಿ ಸಿಗುವ ಅಲ್ಟ್ರಾ ಥಿನ್ ಕಾಂಡೋಮ್ ಬಳಸಬಹುದು. ಈ ವೇಳೆಯೂ ಕಾಂಡೋಮ್ ಗಾತ್ರದ ಬಗ್ಗೆ ಗಮನವಿರಲಿ.
ಕಾಂಡೋಮ್ ಬಳಕೆ ನಂತ್ರ ಉರಿ-ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಇದಕ್ಕೆ ಎಕ್ಸ್ ಪೈರ್ ಕಾಂಡೋಮ್ ಬಳಕೆ ಮುಖ್ಯ ಕಾರಣವಾಗುತ್ತದೆ. ಕೆಲವೊಮ್ಮೆ ಅಲರ್ಜಿಯಿಂದ ಉರಿ-ತುರಿಕೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ತಜ್ಞ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು.