ಕಪ್ಪು ಚಿನ್ನ ಅಂದ ತಕ್ಷಣ ಇದ್ಯಾವುದು ಅಂತ ಕೆಲವರಿಗೆ ಅನ್ನಿಸಬಹದು. ಇದು ಮಸಾಲೆ ಪದಾರ್ಥಗಳ ರಾಜ ಕಾಳು ಮೆಣಸು. ಕಾಳು ಮೆಣಸಿಗೆ ಕಪ್ಪು ಚಿನ್ನ ಅಂತ ಹೇಳ್ತಾರೆ.
ಕೆಂಪು ಮೆಣಸಿನ ಕಾಯಿ ಭಾರತದವರಿಗೆ ಪರಿಚಯವೇ ಇಲ್ಲದ ಕಾಲದಲ್ಲಿ ಖಾರಕ್ಕಾಗಿ ಈ ಕಪ್ಪು ಚಿನ್ನವನ್ನ ಬಳಸ್ತಾ ಇದ್ರು. ಇವತ್ತಿಗೂ ಆಯುರ್ವೇದದಲ್ಲಿ ಕಪ್ಪು ಮೆಣಸಿನ ಹೆಚ್ಚು ಪ್ರಾಮುಖ್ಯತೆ ಇದೆ. ನೆಗಡಿ, ಕೆಮ್ಮಿಗೆ ಕಾಳು ಮೆಣಸು ಔಷಧಿಯಾಗಿ ಕೆಲಸ ಮಾಡತ್ತೆ.
ಕಾಳು ಮೆಣಸಿನಿಂದ ಮಾಡಬಹುದಾದ ಸುಲಭ ಪೇಯ ಇಲ್ಲಿದೆ.
ಕುಟ್ಟಿ ತರಿತರಿಯಾಗಿ ಪುಡಿ ಮಾಡಿದ ಕಾಳು ಮೆಣಸು -2 ಚಮಚ
ನಿಂಬೆ ಹಣ್ಣಿನ ರಸ – ಒಂದು ಚಮಚ
ಜೇನು ತುಪ್ಪ – ಎರಡು ಚಮಚ
ಚಿಟಿಕೆ ಉಪ್ಪು
ಎರಡು ಗ್ಲಾಸ್ ನೀರಿಗೆ ಕಾಳು ಮೆಣಸು ಹಾಕಿ ಅರ್ಧ ನೀರು ಇಂಗುವವರೆಗೂ ಕುದಿಸಿ ಇದಕ್ಕೆ ಉಪ್ಪು ಸೇರಿಸಿ ಕೆಳಗಿಳಿಸಿ. ಇದನ್ನು ಶೋಧಿಸಿ, ನಿಂಬೆ ರಸ ಹಿಂಡಿ, ಜೇನು ತುಪ್ಪ ಹಾಕಿ, ಕಪ್ಪು ಚಿನ್ನದ ಪೇಯ ಸವಿಯಿರಿ.