ನವರಾತ್ರಿ ವರ್ಷದಲ್ಲಿ ನಾಲ್ಕು ಬಾರಿ ಬರುತ್ತದೆ. ಮಾಘ, ಚೈತ್ರ, ಆಷಾಢ ಹಾಗೂ ಆಶ್ವಿಜ ಮಾಸದಲ್ಲಿ 9 ದಿನ ನವರಾತ್ರಿ ಆಚರಿಸಲಾಗುತ್ತದೆ. ಒಂದೊಂದು ನವರಾತ್ರಿಗೂ ಒಂದೊಂದು ಹೆಸರಿದೆ. ಆಷಾಢ ನವರಾತ್ರಿ, ಶರನ್ನವರಾತ್ರಿ, ಪುಷ್ಯ-ಮಾಘ ನವರಾತ್ರಿ.
ಶರನ್ನವರಾತ್ರಿ ವಿಶೇಷವಾಗಿದ್ದು, ದೇಶದಾದ್ಯಂತ ಆಚರಿಸಲಾಗುತ್ತದೆ. ಶಕ್ತಿ ದೇವತೆಯ ಪೂಜೆ ನಡೆಯುತ್ತದೆ. ನವರಾತ್ರಿಯಲ್ಲಿ ಭಕ್ತರು ತಾಯಿ ದುರ್ಗೆಯನ್ನು ಭಯ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಎಷ್ಟು ದುಡಿದ್ರೂ ಕೆಲವರ ಕೈನಲ್ಲಿ ಹಣ ನಿಲ್ಲುವುದಿಲ್ಲ. ಆರ್ಥಿಕ ಸಂಕಷ್ಟ ಸದಾ ಮನೆ ಮಾಡಿರುತ್ತದೆ. ಕೆಲ ಹುಡುಗ ಅಥವಾ ಹುಡುಗಿಗೆ ಕಂಕಣ ಬಲ ಕೂಡಿ ಬರುವುದಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಮದುವೆ ನಿಲ್ಲುತ್ತದೆ. ನವರಾತ್ರಿಯ ಶುಭ ಸಂದರ್ಭದಲ್ಲಿ ಮಾಡುವ ಸಣ್ಣಪುಟ್ಟ ಕೆಲಸಗಳು ಈ ಎಲ್ಲ ಸಮಸ್ಯೆಗೆ ಮುಕ್ತಿ ನೀಡುತ್ತದೆ.
ನವರಾತ್ರಿಯಂದು ಕೆಂಪು ಬಟ್ಟೆಯಲ್ಲಿ 11 ಗೋಮತಿ ಚಕ್ರವನ್ನು ಇಡಿ. ತಾಯಿ ದುರ್ಗೆ ಪೂಜೆ ನಂತ್ರ ಅರಿಶಿನವನ್ನು ಹಚ್ಚಿ, ದೇವರ ಮನೆಯಲ್ಲಿ ಇದನ್ನು ಇಡಿ. ನವಮಿಯಂದು ಕೆಂಪು ಬಟ್ಟೆಯಲ್ಲಿ ಗೋಮತಿಯನ್ನು ಕಟ್ಟಿ ಅಡುಗೆ ಮನೆಯಲ್ಲಿಡಿ.
ನವರಾತ್ರಿಯ ದಿನ ವೀಳ್ಯದೆಲೆ ಮೇಲೆ ದೇವಿಯ ಮೂರ್ತಿಯಿಟ್ಟು, ಗುಲಾಬಿ ದಳವನ್ನು ಅರ್ಪಿಸುವುದ್ರಿಂದ ಧನ ಲಾಭವುಂಟಾಗುತ್ತದೆ.
ನವರಾತ್ರಿಯಂದು ದುರ್ಗಾ ಸಪ್ತಶತಿ ಮಂತ್ರವನ್ನು ಪಠಿಸಬೇಕು. ಮಂತ್ರದ 24 ನೇ ಶ್ಲೋಕವನ್ನು 108 ಬಾರಿ ಜಪಿಸಬೇಕು. ಬೇಗ ಮದುವೆಯಾಗುವ ಭಾಗ್ಯ ಒದಗಿ ಬರುತ್ತದೆ.
ದುರ್ಗಾ ಸಪ್ತಶತಿ ಮಂತ್ರ ಪಠಿಸುವ ಜೊತೆ ಕರ್ಪೂರ ಹಾಗೂ ಲವಂಗವನ್ನು ದುರ್ಗೆಗೆ ಅರ್ಪಿಸಿದ್ರೆ ಜೀವನದ ಅಡೆತಡೆ ದೂರವಾಗುತ್ತದೆ.
ಪ್ರತಿ ದಿನ ಪೂಜೆ ವೇಳೆ ಜೇನುತುಪ್ಪ ಹಾಗೂ ಸುಗಂಧವನ್ನು ಅರ್ಪಿಸಿ.