![](https://kannadadunia.com/wp-content/uploads/2022/01/UISBDQPD4FGBRAEJQJGBOTOU24-scaled.jpeg)
ಓಮಿಕ್ರಾನ್ ರೂಪಾಂತರಿಯ ವಿರುದ್ಧ ಕೊರೊನಾ ಲಸಿಕೆಗಳ ರಕ್ಷಣೆ ಎಂಬ ವಿಷಯದ ಮೇಲೆ ಅಮೆರಿಕದಲ್ಲಿ ನಡೆಸಲಾದ ಮೊದಲ ಅತಿ ದೊಡ್ಡ ಅಧ್ಯಯನ ಇದಾಗಿದೆ. ಶುಕ್ರವಾರ ಪ್ರಕಟವಾದ ಅಧ್ಯಯನದಲ್ಲಿ ಕೊರೊನಾ ಲಸಿಕೆಯನ್ನು ಸ್ವೀಕರಿಸದ ಜನರು ಕೋವಿಡ್ ಸೋಂಕಿಗೆ ಒಳಗಾಗುವ ಅಪಾಯಗಳು ಹೆಚ್ಚಿರುತ್ತದೆ. ಅಲ್ಲದೇ ಇಂತವರಲ್ಲಿ ಕೊರೊನಾದ ತೀವ್ರ ಲಕ್ಷಣಗಳು ಕಂಡುಬರುವ ಸಾಧ್ಯತೆ ಇರುತ್ತದೆ ಎಂದು ಹೇಳಿದೆ.
ಸಿಡಿಸಿ ಅಧ್ಯಯನ ಹೇಳುವುದೇನು..?
ಕೊರೊನಾ ಲಸಿಕೆಯ ಎರಡು ಡೋಸ್ಗಳನ್ನು ಸ್ವೀಕರಿಸುವುದು ಓಮಿಕ್ರಾನ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳನ್ನು 57 ಪ್ರತಿಶತದಷ್ಟು ಕಡಿಮೆ ಮಾಡುತ್ತವೆ. ಎರಡನೇ ಡೋಸ್ ಸ್ವೀಕರಿಸಿದ ಕನಿಷ್ಟ 6 ತಿಂಗಳುಗಳ ಬಳಿಕ ತೆಗೆದುಕೊಳ್ಳುವ ಬೂಸ್ಟರ್ ಡೋಸ್ನಿಂದಾಗಿ ಓಮಿಕ್ರಾನ್ ಅಪಾಯದಿಂದ 90 ಪ್ರತಿಶತದಷ್ಟು ಸುರಕ್ಷಿತವಾಗಿ ಇರಬಹುದಾಗಿದೆ ಎಂದು ಹೇಳಲಾಗಿದೆ.