ಕಳೆದೆರಡು ವರ್ಷಗಳಿಂದ ವಿಶ್ವಕ್ಕೆ ಪಿಡುಗಾಗಿರುವ ಕೊರೋನಾ ತಡೆಗಟ್ಟಲು ನಾನಾ ಪ್ರಯತ್ನಗಳು ನಡೆಯುತ್ತಿವೆ. ಇದರ ನಡುವೆ ಡೇಂಜರಸ್ ಆಗಿ ರೂಪಾಂತರಗೊಳ್ತಿರೊ ಕೋವಿಡ್, ಒಮಿಕ್ರಾನ್, ಡೆಲ್ಟಾ ರೂಪದಲ್ಲಿ ಮತ್ತಷ್ಟು ಭೀತಿ ಸೃಷ್ಟಿಸಿದೆ. ಆದ್ರೆ ಕಾಲಕಾಲಕ್ಕೆ ಸಂಶೋಧಕರು ವೈರಸ್ ಗೆ ಸಲ್ಯೂಷನ್ ಹುಡುಕುವ ಪ್ರಯತ್ನ ಕೈ ಬಿಟ್ಟಿಲ್ಲಾ.
ಒಮಿಕ್ರಾನ್ ಭೀತಿ ನಡುವೆ ಮಾರುಕಟ್ಟೆಗೆ ವೈರಸ್ ತಡೆಗಟ್ಟುವ ಮಾತ್ರೆಯೊಂದು ಎಂಟ್ರಿ ಕೊಟ್ಟಿದೆ. ಈ ಮಾತ್ರೆ ಒಮಿಕ್ರಾನ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಾತ್ರೆಯನ್ನ ಅಭಿವೃದ್ಧಿಪಡಿಸಿದವರು ಭರವಸೆ ನೀಡಿದ್ದಾರೆ. ಈಗಾಗ್ಲೇ ಕೇರಳ ಡ್ರಗ್ ಅಥಾರಿಟಿಯಿಂದ ವೈವಝ್ ಕ್ಯಾಪ್ಸುಲ್ ಗೆ, ಪ್ರಾಡಕ್ಟ್ ಲೈಸೆನ್ಸ್ ಪಡೆದಿರುವ ಆಟ್ರಿಮೆಡ್ ಸಂಸ್ಥೆ ಮಾತ್ರೆಯನ್ನ ಬಿಡುಗಡೆ ಮಾಡಿದೆ.
Big Shocking: 35 ವರ್ಷದ ಮಹಿಳೆ ಮೇಲೆ 13 ವರ್ಷದ ಅಪ್ರಾಪ್ತನಿಂದ ಅತ್ಯಾಚಾರ….!
ಒಮಿಕ್ರಾನ್ ಹಾಗೂ ಡೆಲ್ಟಾ ವಿರುದ್ಧದ ಹೋರಾಟದಲ್ಲಿ ಮಾತ್ರೆಗಳು ಪರಿಣಾಮಕಾರಿ ಎನ್ನುತ್ತಿರುವ ಆಟ್ರಿಮೆಡ್ ಸಂಸ್ಥೆ, ಈ ಮಾತ್ರೆಗಳನ್ನು 30 ಸಸ್ಯಗಳನ್ನ ಬಳಸಿ ತಯಾರಿಸಿದೆ. ವರ್ಷಗಳ ಕಾಲ ನಡೆಸಲಾದ ಸಂಶೋಧನೆಯಿಂದ ಮಾತ್ರೆಗಳು ಪರಿಣಾಮಕಾರಿ ಎಂದು ಪ್ರೂವ್ ಆಗಿದ್ದು, ಸಸ್ಯಗಳಿಗೆ ವೈರಸ್ ತಡೆಯುವ ತಾಕತ್ತಿದೆ ಎಂಬುದು ಧೃಡವಾಗಿದೆ. ಇನ್ನು ಭಾರತ ಸರ್ಕಾರದ ಬಯೋ ಟೆಕ್ನಾಲಜಿ ಪ್ರಯೋಗಾಲದಿಂದ ಮಾತ್ರೆಗಳ ಪರೀಕ್ಷೆ ನಡೆದಿದೆ. ಪರೀಕ್ಷೆಯಲ್ಲಿ ಡೆಲ್ಟಾ ವೈರಸ್ ವಿರುದ್ಧ ಶೇಕಾಡ 99.9 ರಷ್ಟು ಮಾತ್ರೆ ಪರಿಣಾಮಕಾರಿ ಎಂಬುದು ಧೃಡವಾಗಿದೆ.