ಹಿಂದು ಶಾಸ್ತ್ರದಲ್ಲಿ ಏಕಾದಶಿ ತಿಥಿಯನ್ನು ಅತ್ಯಂತ ಒಳ್ಳೆ ತಿಥಿಯೆಂದು ಭಾವಿಸಲಾಗಿದೆ. ಭಗವಂತ ವಿಷ್ಣುವಿಗೂ ಏಕಾದಶಿ ತಿಥಿಗೂ ನೇರ ಸಂಬಂಧವಿರುವುದು ಇದಕ್ಕೆ ಕಾರಣ.
ಈ ದಿನ ಭಗವಂತ ವಿಷ್ಣುವಿನ ಪೂಜೆ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗಲಿದೆ. ವರ್ಷದಲ್ಲಿ 24 ಏಕಾದಶಿಗಳು ಬರುತ್ತವೆ. ಶಾಸ್ತ್ರಗಳ ಪ್ರಕಾರ ಏಕಾದಶಿಯಂದು ಕೆಲವೊಂದು ಕೆಲಸಗಳನ್ನ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುವುದಿಲ್ಲ.
ಶಾಸ್ತ್ರಗಳ ಪ್ರಕಾರ ಪ್ರತಿಯೊಂದು ಗಿಡ – ಮರದಲ್ಲಿ ದೇವಾನುದೇವತೆಗಳು ನೆಲೆಸಿರುತ್ತವೆ. ಹಾಗಾಗಿ ಏಕಾದಶಿಯಂದು ಯಾವುದೇ ಗಿಡವನ್ನು ಕತ್ತರಿಸಬಾರದು.
ಏಕಾದಶಿಯಂದು ಅನ್ನ ಸೇವನೆ ನಿಷಿದ್ಧ. ಯಾವುದೇ ಕಾರಣಕ್ಕೂ ಏಕಾದಶಿಯಂದು ಅನ್ನ ತಿನ್ನಬೇಡಿ. ಅನ್ನ ತಿಂದಲ್ಲಿ ಮಾಡಿದ ಪುಣ್ಯವೆಲ್ಲ ನಷ್ಟವಾಗುತ್ತದೆ.
ಏಕಾದಶಿಯಂದು ಬೇರೆ ವ್ಯಕ್ತಿಗಾಗಿ ಇಟ್ಟ ಆಹಾರ, ಭೋಜನವನ್ನು ತಿನ್ನಬಾರದು. ಒಂದು ವರ್ಷದಿಂದ ಮಾಡಿದ ಪುಣ್ಯವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
ಏಕಾದಶಿಯಂದು ಎಲೆಯಡಿಕೆ ಹಾಕಬಾರದು. ಪಾನ್ ತಿನ್ನುವುದರಿಂದ ಕೆಟ್ಟ ವಿಚಾರಗಳು ತಲೆ ಬರುತ್ತವೆ. ಹಾಗಾಗಿ ಪಾನ್ ನಿಂದ ದೂರವಿರಬೇಕು.