ಕಚೇರಿಯೊಳಗೆ ಕುಳಿತು ಎಸಿ ಸುಖವನ್ನು ಅನುಭವಿಸುವುದು ಎಂದರೆ ಎಲ್ಲರಿಗೂ ಖುಷಿನೇ. ಆದರೆ ಇದು ನಮ್ಮ ದೇಹವನ್ನು ತಂಪಾಗಿಡುವ ಜೊತೆಗೆ ಹಲವು ರೋಗಗಳಿಗೂ ದಾರಿ ಮಾಡಿಕೊಡುತ್ತದೆ. ಹಾಗಾಗಿ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ.
ಎಸಿ ಮೊದಲ ಬಾರಿಗೆ ಬಳಸುವವರಾದರೆ ನಿಮಗೆ ಶ್ವಾಸಕೋಶದ ಸಮಸ್ಯೆ ಕಂಡು ಬಂದೀತು. ಉಸಿರಾಟಕ್ಕೂ ಸಮಸ್ಯೆಯಾದೀತು,
ಈಗಾಗಲೇ ಅಸ್ತಮಾ ಅಥವಾ ಇತರ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಇದ್ದರೆ ಅದು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೆಮ್ಮು ಅಥವಾ ಕಫದ ಸಮಸ್ಯೆ ಇರುವವರು ಸಾಧ್ಯವಾದಷ್ಟು ಎಸಿಯಿಂದ ದೂರ ಇರುವುದು ಒಳ್ಳೆಯದು.
ಎಸಿ ನಮ್ಮ ದೇಹವನ್ನು ತಂಪಾಗಿ ಇಡುವುದರಿಂದ ನಾವು ನೀರು ಕುಡಿಯುವುದನ್ನೇ ಮರೆತು ಬಿಡುತ್ತೇವೆ. ಇದರಿಂದ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಕಂಡು ಬಂದೀತು. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಮರೆಯದೆ ಕುಡಿಯಿರಿ.
ಇದು ತ್ವಚೆಯನ್ನು ಒಣಗಿಸುತ್ತದೆ. ನಿಮ್ಮ ತ್ವಚೆ ಆಕರ್ಷಣೆ ಕಳೆದುಕೊಳ್ಳುವಂತೆ ಮಾಡಬಹುದು. ಎಸಿಯಲ್ಲಿ ಕುಳಿತವರಿಗೆ ಹೊರಗಿನ ಸೂರ್ಯನ ಬೆಳಕನ್ನು ಹೆಚ್ಚು ಸಹಿಸಲು ಸಾಧ್ಯವಾಗುವುದೇ ಇಲ್ಲ.
ಎಸಿಯಿಂದ ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದ ಅಲರ್ಜಿ ಅಥವಾ ಚರ್ಮದ ಸಮಸ್ಯೆ ಹೆಚ್ಚಬಹುದು. ಅಲ್ಲದೆ ಕೆಲವು ಸಾಂಕ್ರಾಮಿಕ ರೋಗಗಳು ಬಹು ಬೇಗನೆ ಹರಡಬಹುದು.