alex Certify ʼಎಟಿಎಂʼ ಬಳಸುವ ಮುನ್ನ ನಿಮಗೆ ತಿಳಿದಿರಲಿ ಈ ಎಲ್ಲ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಎಟಿಎಂʼ ಬಳಸುವ ಮುನ್ನ ನಿಮಗೆ ತಿಳಿದಿರಲಿ ಈ ಎಲ್ಲ ವಿಷಯ

ಬ್ಯಾಂಕಿಂಗ್ ವ್ಯವಸ್ಥೆ ಹೆಚ್ಚು ಸುಲಭ ಮತ್ತು ಸರಳವಾದಂತೆಲ್ಲ ವಂಚಕರೂ ಗ್ರಾಹಕರ ದುಡ್ಡಿಗೆ ಕನ್ನ ಹಾಕಲು ಹೊಸ-ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ. ಈಗಂತೂ ಡಿಜಿಟಲ್ ಕಾಲಘಟ್ಟ. ಹಣಕಾಸಿಗೆ ಸಂಬಂಧಿಸಿದ ಹೆಚ್ಚಿನೆಲ್ಲ ಚಟುವಟಿಕೆಗಳೂ ಆನ್ಲೈನ್ನಲ್ಲೇ ನಡೆಯುತ್ತವೆ. ಆದರೂ, ನಗದಿನ ಅವಶ್ಯಕತೆ ಇದ್ದೇ ಇರುತ್ತದಲ್ಲ..… ನಗದು ವಿತ್‌ ಡ್ರಾ ಮಾಡಲೆಂದು ಬ್ಯಾಂಕ್‌ಗಳೇ ಒದಗಿಸಿರುವ ಎಟಿಎಂ (ATM) ಯಂತ್ರಗಳ ಮೂಲಕವೇ ನಮ್ಮ ದುಡ್ಡಿಗೆ ಕನ್ನ ಹಾಕುವ ಸಾಧ್ಯತೆಗಳು ಹೆಚ್ಚಾಗಿರುತ್ತೆ. ಆದ್ದರಿಂದ ಗ್ರಾಹಕರು ಕೆಲ ಎಚ್ಚರಿಕೆಯನ್ನ ತೆಗೆದುಕೊಳ್ಳಲೇಬೇಕು.

ಎಟಿಎಂ ಬೂತ್‌ಗಳಲ್ಲಿ ಸಹಾಯಕ್ಕಾಗಿ ದೂರವಾಣಿ ಸಂಖ್ಯೆಯನ್ನ, ಗೋಡೆಗೆ ಅಂಟಿಸಿರಲಾಗುತ್ತೆ. ಆ ಸಂಖ್ಯೆಗೆ ಕರೆ ಮಾಡುವ ಮುನ್ನ ಪರಿಶೀಲಿಸಿ ಅದು ಕಳ್ಳರ ದೂರವಾಣಿ ಸಂಖ್ಯೆ ಕೂಡಾ ಆಗಿರುವ ಸಾಧ್ಯತೆಗಳಿರುತ್ತೆ. ಸಹಾಯದ ನೆಪದಲ್ಲಿ ನಿಮ್ಮ ಬ್ಯಾಂಕ್ ಮಾಹಿತಿಯನ್ನ ಸಂಗ್ರಹಿಸಿ ಹಣ ಲೂಟಿ ಮಾಡುವ ಸಾಧ್ಯತೆಗಳಿರುತ್ತೆ.

ಎಟಿಎಂ ಕಾರ್ಡ ಸ್ವೈಪ್ ಮಾಡುವ ಮುನ್ನ ಎಟಿಎಂ ಯಂತ್ರವನ್ನು ಸರಿಯಾಗಿ ಚೆಕ್ ಮಾಡಿ. ಕೆಲ ಬಾರಿ ವಂಚಕರು ವಾಸ್ತವ ಕಾರ್ಡ್ ಸ್ಲಾಟ್ ಅನ್ನು ಮರೆ ಮಾಡಿ ನಕಲಿ ಸ್ಲಾಟ್ ಅನ್ನು ಅಳವಡಿಸಿರುತ್ತಾರೆ.

ಇದರಲ್ಲಿ ಕಾರ್ಡ್ ಹಾಕಿದರೆ ಕಾರ್ಡ್ ಮಾಹಿತಿಯನ್ನೂ ಸೈಬರ್ ವಂಚಕರು ಕದಿಯುವ ಸಾಧ್ಯತೆ ಇರುತ್ತದೆ. ಇನ್ನು ಕೆಲ ಬಾರಿ ಕೀಬೋರ್ಡ್ ಮೇಲ್ಭಾಗದಲ್ಲಿ ಮೈಕ್ರೊ ಕ್ಯಾಮೆರಾ ಅಳವಡಿಸಿ ನಿಮ್ಮ ಪಿನ್ ಕದಿಯಬಹುದು.

ಪಿನ್ ನಂಬರ್ ಟೈಪ್ ಮಾಡುವಾಗ ಪಕ್ಕದಲ್ಲಿದ್ದವರಿಗೆ ಕೀಬೋರ್ಡ್ ಕಾಣದಂತೆ ಕೈ ಅಡ್ಡವಾಗಿಡಿ. ಎಟಿಎಂನಲ್ಲಿ ನಿಮಗೆ ತೀರಾ ಸನಿಹದಲ್ಲಿ ಜನ ನಿಂತಿದ್ದರೆ ಪಿನ್ ನಂಬರ್ ಟೈಪ್ ಮಾಡಲೇಬೇಡಿ.

ಯಾವುದೇ ಕಾರಣಕ್ಕೂ ಅಪರಿಚಿತರಿಂದ ಸಹಾಯ ಪಡೆಯದಿರಿ.

ನಿರ್ಜನ ಪ್ರದೇಶಗಳಲ್ಲಿರುವ ಎಟಿಎಂಗಳನ್ನ ಬಳಸದಿರಿ.

ರಾತ್ರಿ ಸಮಯದಲ್ಲಿ ಉತ್ತಮ ಬೆಳಕಿರುವ ಹಾಗೂ ಹೆಚ್ಚು ಜನಸಂಚಾರ ಇರುವ ಪ್ರದೇಶಗಳಲ್ಲಿನ ಎಟಿಎಂಗಳನ್ನು ಬಳಸುವುದು ಸೂಕ್ತ.

ಸಿಸಿಟಿವಿ ಅಳವಡಿಸಿರುವ ಹಾಗೂ ಬ್ಯಾಂಕ್ ಕಟ್ಟಡದಲ್ಲಿರುವ ಎಟಿಎಂಗಳನ್ನು ಹುಡುಕಿ.

ಈ ಹಿಂದೆ ದರೋಡೆ ಅಥವಾ ವಂಚನೆ ಪ್ರಕರಣಗಳು ನಡೆದ ಎಟಿಎಂಗಳನ್ನು ಆದಷ್ಟು ಬಳಸದೆ ಇರಲು ಪ್ರಯತ್ನಿಸಬೇಕು.

ಇಂಥ ಯಾವುದೇ ವಂಚನೆಯ ಯತ್ನಗಳು ನಿಮ್ಮ ಗಮನಕ್ಕೆ ಬಂದಲ್ಲಿ ಆ ಎಟಿಎಂ ಬಳಸದಿರಿ ಹಾಗೂ ಅದರ ಬಗ್ಗೆ ಸಂಬಂಧಿಸಿದ ಬ್ಯಾಂಕಿಗೆ ತಕ್ಷಣ ಮಾಹಿತಿ ನೀಡಿ. ಹೀಗೆ ಮಾಡುವುದರ ಮೂಲಕ ಇನ್ನೂ ಕೆಲವರು ಮೋಸಕ್ಕೆ ಒಳಗಾಗುವುದನ್ನು ನೀವು ತಡೆಗಟ್ಟಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...