ಒಮ್ಮೆ ಉಬ್ಬಸ ಬಂತೆಂದರೆ ಅದು ಎಂದಿಗೂ ಬಿಟ್ಟು ಹೋಗದು. ಜೀವನಪರ್ಯಂತ ಕಾಡಿಸುತ್ತದೆ. ಮಳೆ, ಚಳಿಗೆ ವ್ಯಕ್ತಿಯನ್ನು ಪೀಡಿಸುತ್ತದೆ. ಇದರ ನಿಯಂತ್ರಣಕ್ಕೆ ಕಷಾಯ ಮಾಡುವ ವಿಧವನ್ನು ತಿಳಿಯೋಣ.
ಹಸಿಶುಂಠಿ, 4 ರಿಂದ 5 ಪುದೀನಾ ಎಲೆ, ಅರಿಶಿಣದ ಪುಡಿ ಒಂದು ಚಿಟಿಕೆಯನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ. ತಣ್ಣಗಾದ ಮೇಲೆ ಸೋಸಿ ಕಾಲು ಚಮಚ ಕರಿಮೆಣಸಿನ ಪುಡಿಯನ್ನು ಬೆರೆಸಿ. ನಂತರ ಆಯುರ್ವೇದ ಅಂಗಡಿಗಳಲ್ಲಿ ಸಿಗುವ ಲವಂಗ ಎಣ್ಣೆಯನ್ನು ಎರಡು ಹನಿಗಳಷ್ಟು ಹಾಕಿ. ಚೆನ್ನಾಗಿ ಕಲಸಿ.
ಅದ್ಭುತವಾದ ಪರಿಣಾಮ ಬೀರುವ ಈ ಕಷಾಯವನ್ನು 7 ದಿನಗಳವರೆಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಬಳಿಕ ಬೆಚ್ಚಗಿನ ನೀರು ಕುಡಿಯಿರಿ. ಉಪ್ಪಿನ ಬಳಕೆ ಕಡಿಮೆ ಮಾಡಿ, ಮೊಳಕೆ ಕಾಳುಗಳನ್ನು ಸೇವಿಸಿ. ಸೀಬೆ ಹಣ್ಣನ್ನು ತಿನ್ನಿ. ಆವಿ ತೆಗೆದುಕೊಳ್ಳುವಾಗ ಆ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಹಾಕಿ, ಇದರಿಂದ ತುಸು ಆರಾಮ ಸಿಗುತ್ತದೆ.