ಬಿಪಿ ಹೆಚ್ಚಿರುವವರು ಅಧಿಕ ಉಪ್ಪು ಸೇವನೆ ಮಾಡಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಹಲವು ಕಾರಣಗಳೂ ಇವೆ. ಭಾರತೀಯರಾದ ನಾವು ಸೇವನೆ ಮಾಡುವ ಆಹಾರದಲ್ಲಿ ಸೋಡಿಯಂ ಪ್ರಮಾಣ ಸಾಕಷ್ಟಿರುತ್ತದೆ. ಹಾಗಾಗಿ ಇದನ್ನು ಹೆಚ್ಚು ಸೇವಿಸುವುದರಿಂದ ಹೃದಯ ಸಂಬಂಧಿ ಹಾಗೂ ರಕ್ತದೊತ್ತಡದ ಸಮಸ್ಯೆಗಳು ಬಹುವಾಗಿ ಕಾಡುತ್ತವೆ.
ಅಧಿಕ ಉಪ್ಪು ಸೇವನೆ ಮಾಡುವವರ ಮೂತ್ರಪಿಂಡ ಬಹುಬೇಗ ಹಾನಿಗೊಳಗಾಗುತ್ತದೆ ಎಂಬುದನ್ನು ವೈದ್ಯರೂ ದೃಢಪಡಿಸುತ್ತಾರೆ. ರಕ್ತದೊತ್ತಡ ಹೆಚ್ಚಿಸುವ ಉಪ್ಪನ್ನು ಕಡಿಮೆ ಬಳಸುವುದರಿಂದ ಬಿಪಿ ಸಮಸ್ಯೆಯಿಂದಲೂ ದೂರವಿರಬಹುದು.
ಹೆಚ್ಚು ಉಪ್ಪು ಸೇವನೆ ನಿಮ್ಮ ದೇಹಕ್ಕೆ ಕಡಿಮೆ ಆಮ್ಲಜನಕವನ್ನು ಪೂರೈಸುತ್ತದೆ. ಅದರೊಂದಿಗೆ ನಿಮ್ಮ ತ್ವಚೆ ಬಹುಬೇಗ ಸುಕ್ಕಾಗುತ್ತದೆ.
ಪುಡಿ ಉಪ್ಪು ತಯಾರಿಕೆಗೆ ಹಲವು ರಾಸಾಯನಿಕಗಳನ್ನು ಬಳಸುವುದರಿಂದ ಇದನ್ನು ಕಡಿಮೆ ಬಳಕೆ ಮಾಡಿದಷ್ಟು ಒಳ್ಳೆಯದು. ಇದರಲ್ಲಿ ನೈಸರ್ಗಿಕ ಉಪ್ಪಿನ ಅಂಶಗಳಿರುವುದಿಲ್ಲ. ಇದರ ತಯಾರಿ ವೇಳೆ ಬಳಸುವ ಬ್ಲೀಚ್ ನ ಪ್ರಮಾಣ ಥೈರಾಯ್ಡ್ ಗ್ರಂಥಿಗೂ ಹಾನಿ ಉಂಟು ಮಾಡುತ್ತದೆ.
ಇನ್ನು ನೀವು ಬಹಳ ಇಷ್ಟಪಟ್ಟು ಸೇವಿಸುವ ಜಂಕ್ ಫುಡ್ ನಲ್ಲೂ ಉಪ್ಪಿನ ಪ್ರಮಾಣ ಹೆಚ್ಚಿರುತ್ತದೆ. ಸಾಧ್ಯವಾದಷ್ಟು ಉಪ್ಪಿನ ಬಳಕೆ ಕಡಿಮೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದಲೂ ದೂರವಿರಬಹುದು.