ದೀರ್ಘಕಾಲದಿಂದ ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡ್ತಿದ್ದರೆ ನೀವು ಮನೆಯ ಸ್ನಾನ ಗೃಹದ ಬಗ್ಗೆ ಗಮನ ನೀಡಿ. ನಿಮ್ಮ ಮನೆ ಸ್ನಾನ ಗೃಹದ ವಾಸ್ತು ಸರಿಯಾಗಿಲ್ಲವೆಂದಾದ್ರೆ ಆರ್ಥಿಕ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. ಮನೆಯಲ್ಲಿ ಅಶಾಂತಿಗೂ ಇದು ಕಾರಣವಾಗುತ್ತದೆ.
ಮನೆಯ ಬಾತ್ ರೂಮಿನಲ್ಲಿ ಗಾಜಿನ ಪಾತ್ರೆಯನ್ನು ಇಡಿ. ಅದ್ರಲ್ಲಿ ನೀವು ಸೋಪ್ ಕೂಡ ಇಡಬಹುದು. ಆದ್ರೆ ಆಗಾಗ ಅದನ್ನು ಸ್ವಚ್ಛಗೊಳಿಸುತ್ತಿರಿ.
ಸ್ನಾನ ಗೃಹ ನಿರ್ಮಾಣ ಮಾಡುವ ವೇಳೆ ಕೊಳಕು ನೀರು ಹೋಗುವ ಪೈಪ್ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರಲಿ. ನೀರು ಸುಲಭವಾಗಿ ಹರಿದು ಹೋಗುವಂತೆ ಇರಬೇಕು. ಸ್ನಾನದ ನೀರು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಹರಿಯುತ್ತಿದ್ದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ.
ಸ್ನಾನ ಗೃಹದಲ್ಲಿ ಕನ್ನಡಿಯಿದ್ದರೆ ಅದು ಬಾಗಿಲ ಕಡೆ ಇರದಂತೆ ನೋಡಿಕೊಳ್ಳಿ. ಮನೆಯ ನಕಾರಾತ್ಮಕ ಶಕ್ತಿಗೆ ಇದು ಕಾರಣವಾಗುತ್ತದೆ. ಆರ್ಥಿಕ ಸಮಸ್ಯೆ ಇದ್ರಿಂದ ಎದುರಾಗುತ್ತದೆ.
ಸ್ನಾನ ಗೃಹದ ಬಕೆಟ್ ತುಂಬಿರಲಿ. ಅದ್ರಲ್ಲಿ ನೀರು ಖಾಲಿಯಾಗದಂತೆ ನೋಡಿಕೊಳ್ಳಿ.
ಆಗ್ನೇಯ ದಿಕ್ಕಿನಲ್ಲಿ ಗೀಸರ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬೇಡಿ. ಇದು ಋಣಾತ್ಮಕ ಶಕ್ತಿ ಹೆಚ್ಚಿಸುತ್ತದೆ.
ಈಶಾನ್ಯ ದಿಕ್ಕಿನಲ್ಲಿ ಸ್ನಾನಗೃಹ ಇರದಂತೆ ನೋಡಿಕೊಳ್ಳಿ. ಇದು ಅನಾರೋಗ್ಯವನ್ನು ಹೆಚ್ಚಿಸುತ್ತದೆ.
ಅಡುಗೆ ಮನೆಯಿಂದ ಸ್ನಾನ ಗೃಹವನ್ನು ದೂರವಿಡಿ. ಅಡುಗೆ ಮನೆ, ಸ್ನಾನ ಗೃಹ ಹಾಗೂ ಬೆಡ್ ರೂಮ್ ಒಟ್ಟಿಗೆ ಇದ್ದಲ್ಲಿ ಸಮಸ್ಯೆ ಹೆಚ್ಚಾಗುತ್ತದೆ.