ಆಫೀಸ್‌ಗಳಲ್ಲಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳ ವರ್ತನೆಗಳ ನಡುವಿನ ವ್ಯತ್ಯಾಸವನ್ನು ನೀವು ಎಂದಾದರೂ ಗಮನಸಿದ್ದೀರಾ? ಸ್ಟಾಂಡರ್ಡ್ ಯುಕೆ ವರದಿ ಪ್ರಕಾರ ಕಾರ್ಯಾಲಯಗಳಲ್ಲಿ ಪುರುಷರು ಮಹಿಳೆಯರ ಎರಡರಷ್ಟು ಭಾವನಾತ್ಮಕವಾಗಿರುತ್ತಾರಂತೆ.
ಕೆಲಸದ ಜಾಗಗಳಲ್ಲಿ ಪುರುಷ ಹಾಗೂ ಮಹಿಳೆಯರ ವರ್ತನೆಗಳ ವ್ಯತ್ಯಾಸಗಳ ಕೆಲಸಗಾರರ ಮೇಲೆ ಈ ಅಧ್ಯಯನ ನಡೆಸಿದೆ.
ಪ್ರಾಜೆಕ್ಟ್‌ಗಳು ಬಜೆಟ್ ಮೀರಿದಾಗ, ಡೆಡ್ಲೈನ್ ದಾಟಿದಾಗ ಅಥವಾ ಕ್ಯಾನ್ಸಲ್ ಆದ ವೇಳೆ ಪುರುಷ ಉದ್ಯೋಗಿಗಳು ತಮ್ಮ ಮಹಿಳಾ ಸಹವರ್ತಿಗಳ ಎರಡರಷ್ಟು ಭಾವುಕರಾಗುತ್ತಾರೆ ಎನ್ನಲಾಗಿದೆ.
ತಮಗೆ ನೀಡಲಾದ ಅಸೈನ್‌ಮೆಂಟ್‌ಗಳಿಗಿಂತಲೂ ಹೆಚ್ಚಾಗಿ ಸಹೋದ್ಯೋಗಿಗಳ ವಿಚಾರದಲ್ಲಿ ಜನರಿಗೆ ಭಾವನೆಗಳ ಕಟ್ಟೆಯೊಡೆಯುತ್ತದೆ ಎನ್ನಲಾಗಿದೆ.