ಆಧಾರ್ ಕಾರ್ಡ್ ಈಗ ಸರ್ಕಾರಿ ಕೆಲಸದಿಂದ ಹಿಡಿದು ಪ್ರತಿಯೊಂದು ವಹಿವಾಟಿಗೂ ಅಗತ್ಯವೆನಿಸಿದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ ಅನೇಕ ಸರ್ಕಾರಿ ಯೋಜನೆಗಳ ಲಾಭ ದೊರೆಯುವುದಿಲ್ಲ. ನಿಮ್ಮ ಗುರುತನ್ನು ನೋಂದಾಯಿಸಲು ಆಧಾರ್ ಕಾರ್ಡ್ ಬೇಕೇ ಬೇಕು.
ನಿಮ್ಮ ಗುರುತನ್ನು ಸಾಬೀತುಪಡಿಸಲು ನೀವು ಆಧಾರ್ ಕಾರ್ಡ್‌ನ ಫೋಟೊ ಕಾಪಿಯನ್ನು ನೀಡಿದರೆ ಅಥವಾ ನಿಮ್ಮ ಆಧಾರ್ ಸಂಖ್ಯೆಯನ್ನು ಹೇಳಿದರೆ ಅದನ್ನು ಇತರರು ದುರುಪಯೋಗಪಡಿಸಿಕೊಳ್ಳಬಹುದೇ ಎಂಬ ಅನುಮಾನ ಸಹಜ.
ಬ್ಯಾಂಕ್ ಖಾತೆ ತೆರೆಯಲು, ಪ್ರಯಾಣದ ಟಿಕೆಟ್ ಕಾಯ್ದಿರಿಸಲು, ಯಾವುದೇ ಸರ್ಕಾರಿ ಸೇವೆಗೆ, ಹೋಟೆಲ್‌ಗಳಲ್ಲಿ ಉಳಿಯಲು, ಉದ್ಯೋಗಗಳಿಗೆ ಸೇರಲು ಇತ್ಯಾದಿಗಳಿಗೆ ಆಧಾರ್ ಅನ್ನು ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಆಧಾರ್ ಸಂಖ್ಯೆಯನ್ನು ಅನೇಕ ಏಜೆಂಟರಿಗೆ ನೀಡುತ್ತೇವೆ, ಕೆಲವೊಮ್ಮೆ ಆಧಾರ್ ಕಾರ್ಡ್ ನ ಫೋಟೊಕಾಪಿ ಕೂಡ ನೀಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಆಧಾರ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವೂ ಇದೆ.
ಆದರೆ, ಆಧಾರ್ ಸಂಖ್ಯೆಯನ್ನು ನೀಡಿದರೆ ಅದನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. UIDAI ಪ್ರಕಾರ, ನಿಮ್ಮ ಆಧಾರ್ ಸಂಖ್ಯೆಯನ್ನು ತಿಳಿದುಕೊಳ್ಳುವುದರಿಂದ ಯಾರೂ ನಿಮಗೆ ಹಾನಿ ಮಾಡಲಾರರು. ಇದನ್ನು ಪಾಸ್‌ಪೋರ್ಟ್, ವೋಟರ್ ಐಡಿ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳಂತಹ ಯಾವುದೇ ಗುರುತಿನ ದಾಖಲೆಯಂತೆ, ನೀವು ಸೇವಾ ಪೂರೈಕೆದಾರರೊಂದಿಗೆ ಹಲವು ವರ್ಷಗಳಿಂದ ಬಳಸುತ್ತಿರುವಿರಿ. ಆಧಾರ್ ಕಾರ್ಡ್ ಹೆಚ್ಚು ವಿಶ್ವಾಸಾರ್ಹವಾಗಿದೆ.
ಆಧಾರ್ ಕಾಯಿದೆ 2016ರ ಪ್ರಕಾರ, ಆಧಾರ್ ಕಾರ್ಡ್ ಅನ್ನು ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಅಥವಾ ಆಫ್‌ಲೈನ್ ಪರಿಶೀಲನೆಯಲ್ಲಿ ದೃಢೀಕರಿಸಬಹುದು. ಪರಿಶೀಲನೆಯನ್ನು ಫಿಂಗರ್‌ಪ್ರಿಂಟ್, ಐರಿಸ್ ಸ್ಕ್ಯಾನ್, OTP ದೃಢೀಕರಣ ಮತ್ತು QR ಕೋಡ್ ಇತ್ಯಾದಿಗಳ ಮೂಲಕ ಮಾಡಲಾಗುತ್ತದೆ. ನಿಮ್ಮ ಗುರುತನ್ನು ಸಾಬೀತುಪಡಿಸಲು ನೀವು ಆಧಾರ್ ಬಳಸಿದರೆ, ಅದನ್ನು ನಕಲು ಮಾಡುವುದು ಅಸಾಧ್ಯ.
ಜನರು ಪಾಸ್‌ಪೋರ್ಟ್, ವೋಟರ್ ಐಡಿ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮುಂತಾದ ಇತರ ಗುರುತಿನ ದಾಖಲೆಗಳನ್ನು ವಂಚನೆಯ ಭಯವಿಲ್ಲದೆ ಮುಕ್ತವಾಗಿ ನೀಡುತ್ತಿದ್ದಾರೆ. ವಂಚನೆ ಮಾಡಿರುವುದೇನಾದ್ರೂ ಬೆಳಕಿಗೆ ಬಂದರೆ ಸೂಕ್ತ ತನಿಖೆ ನಡೆಯುತ್ತದೆ. ಇದೇ ತರ್ಕವು ಆಧಾರ್‌ಗೂ ಅನ್ವಯಿಸುತ್ತದೆ. ವಾಸ್ತವವಾಗಿ ಆಧಾರ್ ಇತರ ಗುರುತಿನ ದಾಖಲೆಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ.
ಇತರ ಐಡಿಗಳಂತೆ ಆಧಾರ್ ಅನ್ನು ಬಯೋಮೆಟ್ರಿಕ್ ಮತ್ತು OTP ದೃಢೀಕರಣ ಮತ್ತು QR ಕೋಡ್‌ಗಳ ಮೂಲಕ ತಕ್ಷಣವೇ ಪರಿಶೀಲಿಸಬಹುದು. ಇದರ ಹೊರತಾಗಿ, ಆಧಾರ್ ಕಾಯಿದೆ, 2016 ರ ಅಡಿಯಲ್ಲಿ, ಯಾವುದೇ ವ್ಯಕ್ತಿಯು ನಿಮ್ಮ ಆಧಾರ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡಾಗ ಅಥವಾ ನಿಮಗೆ ಯಾವುದೇ ಹಾನಿಯನ್ನುಂಟುಮಾಡಲು ಪ್ರಯತ್ನಿಸಿದಾಗ, ದಂಡ ಮತ್ತು ಜೈಲು ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆಗೆ ಅವಕಾಶವಿದೆ.