ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿಯಿದೆ. ಕಾಲಕಾಲಕ್ಕೆ UIDAI ನಿಂದ ಆಧಾರ್ಗೆ ಸಂಬಂಧಿಸಿದ ಹೊಸ ಅಪ್ಡೇಟ್ಗಳನ್ನು ನೀಡಲಾಗುತ್ತದೆ. ಈ ರೀತಿ ಮಾಡುವುದರಿಂದ ಆಧಾರ್ ಕಾರ್ಡ್ ಬಳಕೆದಾರರು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುವುದಿಲ್ಲ. ಆಧಾರ್ ಆಧಾರಿತ ಕೆಲಸಗಳನ್ನು ಸುಲಭವಾಗಿ ನಿಭಾಯಿಸಬಹುದು.
ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ವಿವರಗಳನ್ನ ಅಪ್ಡೇಟ್ ಮಾಡಲು ಅವಕಾಶವಿದೆ. ಕೇವಲ 50 ರೂಪಾಯಿಗಳ ಶುಲ್ಕವನ್ನು ಪಾವತಿಸುವ ಮೂಲಕ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಮತ್ತು ಇಮೇಲ್ ವಿವರಗಳನ್ನು ಸುಲಭವಾಗಿ ನವೀಕರಿಸಬಹುದು ಎಂದು UIDAI ಟ್ವೀಟ್ ಮಾಡಿದೆ. ನಿಮ್ಮ ಹೆಸರು, ವಿಳಾಸ, ಜನ್ಮದಿನಾಂಕ ಇವನ್ನೆಲ್ಲ ಆಧಾರ್ ಕಾರ್ಡ್ನಲ್ಲಿ ಅಪ್ಡೇಟ್ ಮಾಡುವುದು ಬಹಳ ಮುಖ್ಯ. ಇದನ್ನು ನವೀಕರಿಸದಿದ್ದರೆ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿಯೂ ನಿಮಗೆ ತೊಂದರೆಯಾಗಬಹುದು.
ನಿಮ್ಮ ಆಧಾರ್ನಲ್ಲಿರುವ ವಿಳಾಸವನ್ನು ಬದಲಾಯಿಸುವುದರ ಜೊತೆಗೆ, ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಇ-ಆಧಾರ್ ಅನ್ನು ಡೌನ್ಲೋಡ್ ಮಾಡಬಹುದು. ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ನಲ್ಲಿ ನವೀಕರಿಸಿದರೆ, ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಹ ಪರಿಶೀಲಿಸಬಹುದು. ಇದಲ್ಲದೆ, ಎನ್ಪಿಎಸ್ ಖಾತೆಯನ್ನು ಸಹ ತೆರೆಯಬಹುದು. ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರದ ಬಗ್ಗೆಯೂ ನೀವು ಕೇವಲ ಒಂದು ಕ್ಲಿಕ್ನಲ್ಲಿ ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬೇಕು https://bhuvan.nrsc.gov.in/aadhaar/