ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಚರ್ಚೆ ಬೆನ್ನಲ್ಲೇ ಇದೀಗ ದಲಿತ ಹಾಗೂ ಅಹಿಂದ ಸಮಾವೇಶಗಳ ಚರ್ಚೆ ಮುನ್ನೆಲೆಗೆ ಬಂದಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅಹಿಂದ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಹಲವರು ದಲಿತ ಸಮಾವೇಶ ನಡೆಸಲು ಯೋಜನೆ ರೂಪಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪರಮಾಪ್ತ ಡಾ. ಹೆಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾದ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ. ದಲಿತ ಸಮಾವೇಶ ನಡೆಸಿದರೆ ಅಹಿಂದಕ್ಕೆ ಹಿನ್ನಡೆಯಾಗಲಿದೆ. ಆದ್ದರಿಂದ ಅಹಿಂದ ಹೋರಾಟಕ್ಕೂ ಚಾಲನೆ ನೀಡಲು ಕಸರತ್ತು ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಈ ದೇಶದಲ್ಲಿ ಸಿಗಲ್ಲ ಗ್ರೀನ್ ಪಾಸ್
ಈಗಾಗಲೆ ಮಹದೇವಪ್ಪ ಜೊತೆ ಕಾಂಗ್ರೆಸ್ ನ ಕೆಲ ದಲಿತ ನಾಯಕರು ಸಮಾವೇಶದ ಬಗ್ಗೆ ಚರ್ಚೆ ನಡೆಸಿದ ಬೆನ್ನಲ್ಲೇ ಅಲರ್ಟ್ ಆಗಿರುವ ಸಿದ್ದರಾಮಯ್ಯ, ನಾವೇ ಅಹಿಂದ ಸಮಾವೇಶ ನಡೆಸೋಣವೆಂದು ಮನವರಿಕೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಸಿಎಂ ಸ್ಥಾನದ ಚರ್ಚೆ ನಡುವೆಯೇ ಇದೀಗ ಪಕ್ಷದ ವೇದಿಕೆ ಬಿಟ್ಟು ಸಮುದಾಯಗಳ ಮಟ್ಟದಲ್ಲಿ ಸಮಾವೇಶಗಳಿಗೆ ಕೈ ನಾಯಕರು ಚಿಂತನೆ ನಡೆಸಿದ್ದಾರೆ.