
ಬಾದಾಮಿ, ಮೀನು ಹಾಗೂ ಸೋಯಾಬೀನ್ ತೈಲದಲ್ಲಿ ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲವಿರುತ್ತದೆ. ಇದು ಮಕ್ಕಳಿಗೆ ಬಹಳ ಪ್ರಯೋಜನಕಾರಿ. ಇದ್ರ ಸೇವನೆಯಿಂದ ಮಕ್ಕಳಿಗೆ ಅಲರ್ಜಿಯಂತಹ ಯಾವುದೇ ಕಾಯಿಲೆ ಕಾಡುವುದಿಲ್ಲ. ವಿಶೇಷವಾಗಿ ಅಸ್ತಮಾ, ಮೂಗಿನ ಉರಿ ಹಾಗೂ ತುರಿಕೆಯಂತ ಸಮಸ್ಯೆ ಕಾಡುವುದಿಲ್ಲ.
ಸಂಶೋಧನೆಯೊಂದರ ಪ್ರಕಾರ, ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲ ಅಲರ್ಜಿ ವಿರುದ್ಧ ಮಕ್ಕಳು ಹೋರಾಡಲು ನೆರವಾಗುತ್ತದೆ. ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲದಲ್ಲಿ ಒಮೇಗಾ-3 ಮತ್ತು ಒಮೇಗಾ 6 ಕೊಬ್ಬಿನಾಂಶವಿರುತ್ತದೆ. ಇದನ್ನು ಆರ್ಕಿಡೋನಿಕ್ ಆ್ಯಸಿಡ್ ಎಂದು ಕರೆಯುತ್ತಾರೆ.
8ನೇ ವಯಸ್ಸಿನ ಮಕ್ಕಳ ರಕ್ತದಲ್ಲಿ ಒಮೆಗಾ-3 ಅಧಿಕ ಮಟ್ಟದಲ್ಲಿದ್ದರೆ ಅವರಿಗೆ 16ನೇ ವಯಸ್ಸಿನಲ್ಲಿ ಅಸ್ತಮಾ ಸೇರಿದಂತೆ ಮೂಗಿನ ಕಿರಿಕಿರಿ ಕಾಡುವುದಿಲ್ಲ. ಸಾಮಾನ್ಯವಾಗಿ ಮಕ್ಕಳಿಗೆ ಅಲರ್ಜಿ ಸಮಸ್ಯೆ ಸಣ್ಣ ವಯಸ್ಸಿನಲ್ಲಿಯೇ ಕಾಡಲು ಶುರುವಾಗುತ್ತದೆಯಂತೆ.