ಅಸ್ತಮಾ ಸಮಸ್ಯೆ ಕಾಡುವವರನ್ನು ನೀವು ಗಮನಿಸಿರಬಹುದು. ದಿನವಿಡೀ ಕೆಮ್ಮುತ್ತಾ, ಗಂಟಲಲ್ಲಿ ಗೊರಗೊರ ಸದ್ದು ಮಾಡುತ್ತಾ ಕುಳಿತಿರುತ್ತಾರೆ. ಅದೂ ಚಳಿಗಾಲದಲ್ಲಿ ಅಸ್ತಮಾ ಸಮಸ್ಯೆ ಕಾಡುವುದು ಹೆಚ್ಚು.
ಇದಕ್ಕೆ ವೈದ್ಯರ ಔಷಧ ಅತ್ಯಗತ್ಯವಾಗಿದ್ದರೂ ಕೆಲವೊಂದು ಮನೆಮದ್ದುಗಳ ಮೂಲಕ ಇದರ ತೀವ್ರತೆಯನ್ನು ಕಡಿಮೆ ಮಾಡಬಹುದು. ಅದೇನೆಂದು ನೋಡೋಣ.
ನೀರು ಕುದಿಸಿ. ಪುದೀನಾ ಎಲೆ ಹಾಕಿ. ಚಿಟಿಕೆ ಅರಶಿನ, ಕಾಳು ಮೆಣಸಿನ ಪುಡಿ ಉದುರಿಸಿ ಮತ್ತೆ ಕುದಿಸಿ. ಒಂದು ಲೋಟ ನೀರು ಅರ್ಧಕ್ಕೆ ಇಳಿಯಲಿ. ಇದಕ್ಕೆ ಎರಡು ಹನಿ ಲವಂಗದ ಎಣ್ಣೆ ಹಾಕಿ.
ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಎದೆ ಬಿಗಿದು ಹಿಡಿದ ಅನುಭವ ಕಡಿಮೆಯಾಗುತ್ತದೆ. ಮಾತ್ರವಲ್ಲ ಕೆಮ್ಮು ಕೂಡಾ ಕಡಿಮೆಯಾಗುತ್ತದೆ. ನಿತ್ಯ ಕುಡಿಯುವ ಹಾಲು ಅಥವಾ ಕಷಾಯ-ಚಹಾಗೆ ಚಿಟಿಕೆ ಕಾಳುಮೆಣಸಿನ ಪುಡಿ ಬೆರೆಸಿ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದಲೂ ಅಸ್ತಮಾದ ಲಕ್ಷಣಗಳಿಂದ ಮುಕ್ತಿ ಪಡೆಯಬಹುದು.