
ದಾಂಪತ್ಯ ಗಟ್ಟಿಯಾಗಿರಲು ಸೆಕ್ಸ್ ಅನಿವಾರ್ಯ. ಮದುವೆಯ ಆರಂಭದಲ್ಲಿದ್ದ ಉತ್ಸಾಹ ವರ್ಷ ಕಳೆದಂತೆ ಕಡಿಮೆಯಾಗ್ತಾ ಹೋಗುತ್ತದೆ. ಸೆಕ್ಸ್ ನಲ್ಲಿ ರುಚಿ ಕಳೆದುಕೊಂಡ ಅನೇಕರು ಅಶ್ಲೀಲ ಚಿತ್ರಗಳ ಮೊರೆ ಹೋಗ್ತಾರೆ.
ಪೋರ್ನ್ ಚಿತ್ರಗಳನ್ನು ವೀಕ್ಷಿಸಿ ಮತ್ತೆ ಸೆಕ್ಸ್ ನಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುವ ಯತ್ನ ನಡೆಸುತ್ತಾರೆ. ಆದ್ರೆ ಅಶ್ಲೀಲ ಚಿತ್ರ ವೀಕ್ಷಣೆಯಿಂದ ಎಷ್ಟು ಲಾಭವಿದೆಯೋ ಅಷ್ಟೇ ನಷ್ಟ ಕೂಡ ಇದೆ.
ಅಶ್ಲೀಲ ಚಿತ್ರ ವೀಕ್ಷಣೆಯ ನಷ್ಟ
ಪೋರ್ನ್ ಚಿತ್ರ ವೀಕ್ಷಣೆಯಿಂದ ಗಿಲ್ಟ್ ಕಾಡುವ ಸಾಧ್ಯತೆಯಿರುತ್ತದೆ. ಜೊತೆಗೆ ಅನೇಕ ಸಂಶಯಗಳು ಇದ್ರಿಂದ ಉದ್ಭವವಾಗಿ ದಾಂಪತ್ಯ ಜೀವನ ಮುರಿದು ಬೀಳುವ ಅಪಾಯವಿರುತ್ತದೆ.
ಅಶ್ಲೀಲ ಚಿತ್ರ ವೀಕ್ಷಣೆಯಿಂದ ಅನೇಕರಿಗೆ ಕ್ಷಣಿಕ ಸುಖ ಸಿಗುತ್ತದೆ. ಹಾಗಾಗಿ ಸಂಗಾತಿ ಸುಖ ಬಯಸದೆ ದೂರವಾಗುವ ಸಾಧ್ಯತೆಯಿರುತ್ತದೆ.
ಅಶ್ಲೀಲ ಚಿತ್ರ ವೀಕ್ಷಣೆ ನಂತ್ರ ಅಸಹನೆ ಕಾಡುತ್ತದೆ. ಸಂಗಾತಿಗೆ ನಾನು ಸೂಕ್ತನಲ್ಲ ಎಂಬ ಸಂಶಯ ಬರುತ್ತದೆ. ಇದು ಲೈಂಗಿಕ ಜೀವನವನ್ನು ಹಾಳು ಮಾಡುತ್ತದೆ.
ಅಶ್ಲೀಲ ಚಿತ್ರ ವೀಕ್ಷಣೆ ಲಾಭ
ಸಂಗಾತಿ ನಿಮ್ಮಿಂದ ಲೈಂಗಿಕ ಸುಖ ಸಿಗದೆ ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಾರೆಂದು ಅರ್ಥೈಸಿಕೊಳ್ಳಬೇಡಿ.
ಅಶ್ಲೀಲ ಚಿತ್ರ ವೀಕ್ಷಣೆ ನಂತ್ರ ನಿಮ್ಮ ಕಲ್ಪನಾ ಶಕ್ತಿ ಹೆಚ್ಚಾದ್ರೆ ಲೈಂಗಿಕ ಸುಖ ಕೂಡ ಹೆಚ್ಚಾಗುತ್ತದೆ.
ಅಶ್ಲೀಲ ಚಿತ್ರವನ್ನು ಒಟ್ಟಿಗೆ ವೀಕ್ಷಣೆ ಮಾಡಿದ್ರೆ ಇಬ್ಬರ ಮಧ್ಯೆಯಿರುವ ಗೊಂದಲ ಕಡಿಮೆಯಾಗುತ್ತದೆ. ಸಂಗಾತಿಗಳು ಮತ್ತಷ್ಟು ಹತ್ತಿರವಾಗ್ತಾರೆ.
ಅಶ್ಲೀಲ ಚಿತ್ರಗಳು ನೈಜವಾಗಿರುವುದಿಲ್ಲ. ಆದ್ರೆ ಅದ್ರಲ್ಲಿರುವ ಕೆಲ ಒಳ್ಳೆ ಮಾಹಿತಿಯನ್ನು ಸಂಗಾತಿಗಳು ತಮ್ಮ ಲೈಂಗಿಕ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಹೊಸ ಪ್ರಯೋಗಕ್ಕೆ ಮುಂದಾಗಬಹುದು.