ಅಮವಾಸ್ಯೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಹಾಗೂ ದಾನ ಮಾಡುವ ನಂಬಿಕೆಯಿದೆ. ಈಗಲೂ ಅನೇಕರು ಈ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಅಮವಾಸ್ಯೆಯಂದು ಪೂಜೆ ಮಾಡುವುದ್ರಿಂದ ದೇವಾನುದೇವತೆಗಳ ವಿಶೇಷ ಆಶೀರ್ವಾದ ಸಿಗುತ್ತದೆ.
ಅಮವಾಸ್ಯೆ ಒಂದು ಪವಿತ್ರ ತಿಥಿ. ಈ ದಿನ ಪೂಜೆ-ದಾನ-ಧರ್ಮ ಮಾಡಬೇಕು. ಅಮವಾಸ್ಯೆಯಂದು ವರ್ಜಿಯ ಕೆಲಸ ಮಾಡುವವರಿಗೆ ಅದೃಷ್ಟ ಪ್ರಾಪ್ತಿಯಾಗುವುದಿಲ್ಲ. ಜೊತೆಗೆ ಆರೋಗ್ಯ ಹಾಗೂ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆ ಎದುರಾಗುತ್ತದೆ. ಗರುಡ ಪುರಾಣದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ವಿವರವಾಗಿ ಹೇಳಲಾಗಿದೆ.
ಅಮವಾಸ್ಯೆಯಂದು ಹುಟ್ಟಿದ ವ್ಯಕ್ತಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜಾತಕದಲ್ಲಿ ಸೂರ್ಯ ಹಾಗೂ ಚಂದ್ರ ಒಂದೇ ಸ್ಥಾನದಲ್ಲಿದ್ದರೆ ಅಮವಾಸ್ಯೆ ಯೋಗ ಲಭಿಸುತ್ತದೆ. ಈ ಯೋಗ ಪ್ರಾಪ್ತಿಯಾದಲ್ಲಿ ಯಾವ ಕೆಲಸವೂ ಸುಲಭವಾಗಿ ನಡೆಯುವುದಿಲ್ಲ.
ಜಾತಕದಲ್ಲಿ ಅಮವಾಸ್ಯೆ ಯೋಗವಿರುವವರು ಸೂರ್ಯ ಹಾಗೂ ಚಂದ್ರನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿದಿನ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು. ಹುಣ್ಣಿಮೆ ದಿನ ಚಂದ್ರನಿಗೆ ಜಲವನ್ನು ಅರ್ಪಿಸಬೇಕು.
ಅಮವಾಸ್ಯೆಯಂದು ಎಲ್ಲರೂ ಅಶ್ವತ್ಥ ಪೂಜೆ ಮಾಡಬೇಕು. ಅಶ್ವತ್ಥ ಗಿಡಕ್ಕೆ ನೀರನ್ನು ಅರ್ಪಿಸಿ ಏಳು ಪ್ರದಕ್ಷಿಣೆ ಹಾಕಬೇಕು.
ತಾಮ್ರದ ಪಾತ್ರೆಯಲ್ಲಿ ಶಿವಲಿಂಗಕ್ಕೆ ಜಲವನ್ನು ಅರ್ಪಿಸಿ. ಬಿಲ್ವ ಪತ್ರೆಯನ್ನು ನೀಡಿ.
ಬಡ ವ್ಯಕ್ತಿಯನ್ನು ಮನೆಗೆ ಕರೆದು ಆಹಾರ ನೀಡಿ.
ಹನುಮಂತನ ಮುಂದೆ ಎಣ್ಣೆ ದೀಪವನ್ನು ಹಚ್ಚಿ, ಹನುಮಾನ್ ಚಾಲೀಸ್ ಓದಿ.
ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಜಲವನ್ನು ಅರ್ಪಿಸಿ.
ಅಮವಾಸ್ಯೆ ರಾತ್ರಿ ಯಾವುದೇ ಸ್ಮಶಾನ ಅಥವಾ ಕಾಡಿನ ಪ್ರದೇಶಕ್ಕೆ ಹೋಗಬೇಡಿ. ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿರುವುದ್ರಿಂದ ಜೀವನದಲ್ಲಿ ಅನೇಕ ಸಮಸ್ಯೆ ಕಾಡುತ್ತದೆ.
ಅಮವಾಸ್ಯೆ ದಿನ ಬೆಳಿಗ್ಗೆ ತುಂಬಾ ಹೊತ್ತು ಮಲಗಬೇಡಿ.
ಅಮವಾಸ್ಯೆಯಂದು ಪತಿ-ಪತ್ನಿ ಸಂಬಂಧ ಬೆಳೆಸಬಾರದು. ಗರುಡ ಪುರಾಣದ ಪ್ರಕಾರ ಅಮವಾಸ್ಯೆಯಂದು ಸಂಬಂಧ ಬೆಳೆಸುವುದ್ರಿಂದ ಸಂತಾನ ಸುಖ ಪ್ರಾಪ್ತಿಯಾಗುವುದಿಲ್ಲ.
ಅಮವಾಸ್ಯೆಯಂದು ಜಗಳ ಮಾಡಬೇಡಿ. ಮನೆಯಲ್ಲಿ ಜಗಳವಾದ್ರೆ ಪಿತೃರ ಕೃಪೆ ಪ್ರಾಪ್ತಿಯಾಗುವುದಿಲ್ಲ.
ಬಡವರನ್ನು ಅವಮಾನಿಸಬೇಡಿ. ಅವರಿಗೆ ಅವಮಾನ ಮಾಡಿದಲ್ಲಿ ರಾಹು-ಕೇತು ಕೋಪಗೊಳ್ತಾರೆ.