
ಕೆಲ ವಾರಗಳ ಹಿಂದಷ್ಟೇ ಪುನೀತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಂದೆಯ ಜೊತೆಗಿನ ಬಾಲ್ಯದ ಫೋಟೋವನ್ನು ಶೇರ್ ಮಾಡಿದ್ದರು. ನಯಾಗರ ಫಾಲ್ಸ್ ಮುಂದೆ ಕ್ಲಿಕ್ಕಿಸಲಾದ ಫೋಟೋದಲ್ಲಿ ರಾಜ್ಕುಮಾರ್ ಕೈಯಲ್ಲಿ ಕೋಲಾ ಹಿಡಿದಿದ್ದರೆ ಅವರ ಪಕ್ಕದಲ್ಲಿ ನಿಂತಿರುವ ಪುನೀತ್ ನಗೆಯಾಡುತ್ತಿದ್ದಾರೆ.
BIG BREAKING: ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ ಪವರ್ ಸ್ಟಾರ್ ಆರೋಗ್ಯ ಸ್ಥಿತಿ; ವಿಕ್ರಂ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ದೌಡು
ಜಿಮ್ ಕಸರತ್ತು ಮಾಡುತ್ತಿದ್ದ ವೇಳೆ ತೀವ್ರ ಹೃದಾಯಾಘಾತ ಕಂಡು ಬಂದ ಹಿನ್ನೆಲೆಯಲ್ಲಿ ಪುನೀತ್ರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಪುನೀತ್ರನ್ನು ಬದುಕುಳಿಸಲು ವೈದ್ಯರು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ ವಿಧಿಯಾಟ ಬೇರೆಯದ್ದೇ ಇತ್ತು. ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಪುನೀತ್ ವಿಧಿವಶರಾಗಿದ್ದಾರೆ.
ಸದ್ಯ ಪುನೀತ್ ರಾಜ್ಕುಮಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಮೊದಲು ಸದಾಶಿವನಗರದ ನಿವಾಸದಲ್ಲಿ ಪುನೀತ್ರ ಪಾರ್ಥೀವ ಶರೀರವನ್ನು ಇರಿಸಲಾಗಿದೆ. ಬಳಿಕ ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ರಾಜ್ಕುಮಾರ್ ಪಾರ್ಥೀವ ಶರೀರ ಮೆರವಣಿಗೆ ಮೂಲಕ ತೆರಳಲಿದೆ. ಅಮೆರಿಕದಲ್ಲಿರುವ ಪುತ್ರಿಯ ಆಗಮನಕ್ಕೆ ಕುಟುಂಬಸ್ಥರು ಕಾಯುತ್ತಿದ್ದಾರೆ.