ಪೈನಾಪಲ್ ಪೋಷಕಾಂಶಗಳ ಆಗರ. ಇದರಿಂದ ಗೊಜ್ಜು, ಕೇಸರಿಭಾತ್, ಜ್ಯೂಸು, ಸಲಾಡ್, ಸಾಸಿವೆ ಇತ್ಯಾದಿ ರುಚಿಕರವಾದ ಅಡುಗೆ ಮಾಡಬಹುದು.
ಜೊತೆಗೆ ಪೈನಾಪಲ್ ಅನ್ನು ಹಾಗೇ ತಿನ್ನುವ ಬದಲು ಕರಿ ಮೆಣಸಿನ ಪುಡಿ ಹಾಕಿ ಸೇವಿಸಿದರೆ ಎಷ್ಟೇಲ್ಲಾ ಪ್ರಯೋಜನವಿದೆ ಗೊತ್ತಾ.
* ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಜೀರ್ಣ ರೋಗ ದೂರವಾಗುತ್ತದೆ.
* ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಆಮ್ಲ ಪಿತ್ತ ದೂರವಾಗುತ್ತದೆ.
* ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಹಾಕಿ ಸೇವಿಸಿದರೆ ಕೆಮ್ಮು, ಕಫಾ ಕಡಿಮೆ ಆಗುತ್ತದೆ.
* ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಅರಿಶಿಣ ಕಾಮಾಲೆ ಗುಣವಾಗುತ್ತದೆ.
* ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಧೂಮಪಾನದಿಂದ ಉಂಟಾಗುವ ಅನೇಕ ದುಷ್ಪರಿಣಾಮಗಳು ದೂರವಾಗುತ್ತವೆ.
* ಅನಾನಸ್ ಹಣ್ಣಿನ ರಸವನ್ನು ಕಜ್ಜಿ, ತುರಿಕೆ ಇದ್ದಲ್ಲಿ ಹಚ್ಚಿ ತಿಕ್ಕಿದರೆ ವಾಸಿಯಾಗುತ್ತವೆ.