
ಅಕ್ಷಯ ತೃತೀಯ ಬಹಳ ಮಹತ್ವವಾದ ದಿನ. ಈ ದಿನದಂದು ಲಕ್ಷ್ಮಿ ಮತ್ತು ಕುಬೇರನನ್ನು ಸಂಪತ್ತಿನ ಅಧಿಪತಿಗಳಾಗಿ ಮಾಡಿದ ದಿನ, ಕುಚೇಲನನ್ನು ಕೃಷ್ಣ ಕುಬೇರನಾಗಿ ಮಾಡಿದ ದಿನ. ಹಾಗಾಗಿ ಈ ದಿನದಂದು ನೀವು ಈ ಮಹತ್ವವಾದ ಕೆಲಸಗಳನ್ನು ಮಾಡಿದರೆ ಐಶ್ವರ್ಯವಂತರಾಗುತ್ತೀರಿ ಎನ್ನಲಾಗಿದೆ.
ಅಕ್ಷಯ ತೃತೀಯ ದಿನದಂದು ಲಕ್ಷ್ಮಿ, ಕುಬೇರರ ಪೂಜೆ ಮಾಡಿದರೆ ವಿಶೇಷ ಫಲ ಸಿಗುತ್ತದೆ. ಹಾಗಾಗಿ ಹಳದಿ ಬಣ್ಣದ ಬಟ್ಟೆ ಧರಿಸಿ ಪೂಜೆ ಮಾಡಿ ಮತ್ತು ಒಂದು ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ಅದಕ್ಕೆ ಬೆಲ್ಲವನ್ನು ಮಿಕ್ಸ್ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಬೇಕು. ಸಂಜೆಯ ವೇಳೆ ಅದನ್ನು ಸೇವಿಸಬೇಕು. ಇದರಿಂದ ಕುಬೇರನ ಅನುಗ್ರಹ ದೊರೆಯುತ್ತದೆ.