ಅಕ್ಷಯ ತೃತೀಯಕ್ಕಾಗಿ ತಂಜಾವೂರ್ ಶೈಲಿಯಿಂದ ಪ್ರೇರಿತವಾಗಿ ವೈಭವದ ತಂಜಾವೂರ್ ಕಲೆಕ್ಷನ್ ಅನ್ನು ರಿಲಯನ್ಸ್ ಜ್ಯುವೆಲ್ಸ್ ಅನಾವರಣಗೊಳಿಸಿದೆ. ಭಾರತದ ಪ್ರಮುಖ ಆಭರಣ ಬ್ರ್ಯಾಂಡ್ ರಿಲಯನ್ಸ್ ಜ್ಯುವೆಲ್ಸ್ ಅಕ್ಷಯ ತೃತೀಯಕ್ಕೆ ವೈಭವಯುತವಾದ ಸಂಗ್ರಹ “ತಂಜಾವೂರ್” ಅನ್ನು ಪ್ರಸ್ತುತಪಡಿಸುತ್ತಿದೆ.
ಸ್ಮರಣೀಯ ದೇಗುಲಗಳು, ಅರಮನೆ ದರ್ಬಾರ್ ಹಾಲ್, ಡೋಲುಗಳು ಮತ್ತು ಕಲಾತ್ಮಕತೆಯಿಂದ ಪ್ರೇರಿತ ಆಭರಣ ಸಂಗ್ರಹ ಇದಾಗಿದೆ. ಈ ಬಿಡುಗಡೆ ಕಾರ್ಯಕ್ರಮವು ಬೆಂಗಳೂರಿನ ಶಾಂಗ್ರಿ-ಲಾ ದಲ್ಲಿ ಏಪ್ರಿಲ್ 5ರ ಬುಧವಾರ ನಡೆಯಿತು.
ಈ ವೇಳೆ ಗ್ರಾಹಕರು, ಮಾಧ್ಯಮ, ಫ್ಯಾಷನ್ ಕ್ಷೇತ್ರದ ಗಣ್ಯರು ಮತ್ತು ಸಂಭಾವ್ಯ ಖರೀದಿದಾರರು ಹಾಜರಿದ್ದರು. ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಆಗಿ ನಟಿ ಜಾನ್ವಿ ಕಪೂರ್ ಭಾಗಿಯಾಗಿದ್ದರು. ತಂಜಾವೂರ್ ಸಂಗ್ರಹದ ಆಭರಣವನ್ನು ಅವರು ಧರಿಸಿ, ಕಣ್ಮನ ಸೆಳೆದರು.
ಜಾನ್ವಿ ಕಪೂರ್ ವಜ್ರ ಖಚಿತ ನೆಕ್‌ಲೇಸ್ ಮತ್ತು ಕಿವಿಯೋಲೆ ಕಲೆಕ್ಷನ್ ಅನ್ನು ಧರಿಸಿದ್ದರು. ಇದು ಟೆಂಪಲ್ ಮಿಕ್ಸ್ ವಿನ್ಯಾಸಗಳಿಂದ ಪ್ರೇರಿತವಾಗಿದ್ದು, ರೋಸ್ ಗೋಲ್ಡ್‌ನಲ್ಲಿ ಕುಸುರಿ ಮಾಡಲಾಗಿತ್ತು. ವಿನ್ಯಾಸದಲ್ಲಿ ಸೂಕ್ಷ್ಮ ಕೆತ್ತನೆ ಮತ್ತು ಕುಸುರಿ ಕೆಲಸಕ್ಕೆ ಹೆಚ್ಚಿನ ಗಮನ ಹರಿಸಿರುವುದರಿಂದ ತಂಜಾವೂರು ರಾಜರ ಕಾಲದ ಐತಿಹಾಸಿಕ ಅಂಶಗಳು ಅತ್ಯುತ್ತಮವಾಗಿ ಮೂಡಿಬಂದಿವೆ.
ಜಾನ್ವಿ ಕಪೂರ್ ಪ್ರದರ್ಶಿಸಿದ ಕಲೆಕ್ಷನ್ ಜೊತೆಗೆ, ಚಿನ್ನ ಮತ್ತು ವಜ್ರದ ಆಭರಣ ಶ್ರೇಣಿಯೂ ಪ್ರದರ್ಶನಗೊಂಡಿದೆ. ಇವುಗಳನ್ನು ಆ ಪ್ರದೇಶದ ಕಲೆ ಮತ್ತು ವಾಸ್ತುಶಿಲ್ಪವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಕಲೆಕ್ಷನ್‌ನಲ್ಲಿ ವಿವಿಧ ವಿನ್ಯಾಸಗಳು, ಸಾಂಪ್ರದಾಯಿಕ, ಸಮಕಾಲೀನ ಮತ್ತು ಫ್ಯೂಷನ್ ವಿನ್ಯಾಸಗಳಿವೆ. ಇವು ಗ್ರಾಹಕರ ವೈವಿಧ್ಯಮಯ ಆಸಕ್ತಿ ಮತ್ತು ಆದ್ಯತೆಗಳನ್ನು ಒಳಗೊಂಡಿವೆ.
ತಂಜಾವೂರು ಕಲೆಕ್ಷನ್ ವಿವಿಧ ರೀತಿಯ ಆಭರಣಗಳು ಒಳಗೊಂಡಿದ್ದು, ಇವುಗಳನ್ನು ವಿವಾಹದಿಂದ ಹಬ್ಬದ ಕಾರ್ಯಕ್ರಮಗಳು ಹಾಗೂ ವಿಶೇಷ ಸಂದರ್ಭಗಳು ಸೇರಿದಂತೆ ಎಲ್ಲ ಸಮಯಕ್ಕೂ ಧರಿಸಬಹುದು. ಕಲೆಕ್ಷನ್‌ನಲ್ಲಿ ಅದ್ಭುತ ನೆಕ್‌ಲೇಸ್ ಸೆಟ್‌ಗಳು, ಚೋಕರ್‌ಗಳು, ಪದರವನ್ನು ಹೊಂದಿರುವ ನೆಕ್‌ಲೇಸ್‌ಗಳು, ಬ್ರೇಸ್‌ಲೆಟ್‌ಗಳು, ಕಿವಿಯೋಲೆಗಳು, ರಿಂಗ್‌ಗಳು, ವೇಸ್ಟ್‌ಬೆಲ್ಟ್‌ಗಳು, ಮಾಂಗ್ ಟಿಕ್ಕಾಗಳು, ಕಿವಿ ಚೈನ್‌ಗಳು ಮತ್ತು ಇತರೆ ಒಳಗೊಂಡಿವೆ.