ನವದೆಹಲಿ: ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿರುವ ʻಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾʼ(ಎಚ್.ಎಂ.ಎಸ್.ಐ), ಸ್ಮಾರ್ಟ್ ಮತ್ತು ಸುಧಾರಿತ ಆಕ್ಟಿವಾ 2023 ಅನ್ನು ಇಂದು ಅನಾವರಣಗೊಳಿಸಿದೆ. ಇದು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಚೊಚ್ಚಲ ʻಒಬಿಡಿ 2ʼ (ಆನ್-ಬೋರ್ಡ್ ಡೈಯಾಗ್ನಸ್ಟಿಕ್-2) ಮಾನದಂಡ ಪೂರೈಸುವ ದ್ವಿಚಕ್ರ ವಾಹನವಾಗಿದ್ದು, ಏಪ್ರಿಲ್ 2023ರ ಗಡುವಿಗೆ ಮುಂಚಿತವಾಗಿಯೇ ಬಿಡುಗಡೆಗೊಂಡಿದೆ.
ಜಾಗತಿಕವಾಗಿ ಮೆಚ್ಚುಗೆ ಪಡೆದ ʻಹೋಂಡಾ ಸ್ಮಾರ್ಟ್ ಕೀʼ ಅನ್ನು ಹೊಸ ಸುಧಾರಿತ ಮತ್ತು ಸ್ಮಾರ್ಟ್ ʻಆಕ್ಟಿವಾ 2023ʼನಲ್ಲಿ ಪರಿಚಯಿಸಲಾಗಿದೆ. ಹೋಂಡಾ ʻಸ್ಮಾರ್ಟ್ ಕೀ ಸಿಸ್ಟಮ್ʼ ಈ ಕೆಳಗಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ:
ಸ್ಮಾರ್ಟ್ ಫೈಂಡ್: ʻಸ್ಮಾರ್ಟ್ ಕೀʼನಲ್ಲಿರುವ ʻಪ್ರತ್ಯುತ್ತರ ವ್ಯವಸ್ಥೆʼಯು (ಆನ್ಸರ್ ಬ್ಯಾಕ್) ವಾಹನವನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ʻಹೋಂಡಾ ಸ್ಮಾರ್ಟ್ ಕೀʼನಲ್ಲಿರುವ ʻಆನ್ಸರ್ ಬ್ಯಾಕ್ʼ ಗುಂಡಿಯನ್ನು ಒತ್ತಿದಾಗ, ಸ್ಕೂಟರ್ ಅನ್ನು ಪತ್ತೆಹಚ್ಚಲು ಅನುವಾಗುವಂತೆ ಎಲ್ಲಾ 4 ವಿಂಕರ್‌ಗಳು ಎರಡು ಬಾರಿ ಮಿನುಗುತ್ತವೆ.
ಸ್ಮಾರ್ಟ್ ಅನ್ಲಾಕ್: ʻಸ್ಮಾರ್ಟ್ ಕೀʼ ವ್ಯವಸ್ಥೆಯು ಹೊಸ ತಂತ್ರಜ್ಞಾನದ ವೈಶಿಷ್ಟ್ಯವಾಗಿದ್ದು, ಭೌತಿಕ ಕೀಲಿಯನ್ನು ಬಳಸದೆ ವಾಹನವನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಸಾಧ್ಯವಾಗಿಸುತ್ತದೆ. ಸಕ್ರಿಯಗೊಳಿಸಿದ ನಂತರ 20 ಸೆಕೆಂಡುಗಳ ಕಾಲ ಯಾವುದೇ ಚಟುವಟಿಕೆ ಕಂಡುಬರದಿದ್ದರೆ, ಸ್ವಯಂಚಾಲಿತವಾಗಿ ಸ್ಕೂಟರ್ ನಿಷ್ಕ್ರಿಯಗೊಳ್ಳುತ್ತದೆ.
ಸ್ಮಾರ್ಟ್ ಸ್ಟಾರ್ಟ್: ʻಸ್ಮಾರ್ಟ್ ಕೀʼ ವಾಹನದ 2 ಮೀಟರ್ ವ್ಯಾಪ್ತಿಯೊಳಗೇ ಇದ್ದರೆ, ಸವಾರನು ʻಎಲ್ಒಸಿ ಮೋಡ್ʼ(Loc Mod)ನಲ್ಲಿರುವ ನಾಬ್ ಅನ್ನು ಇಗ್ನಿಷನ್ ಸ್ಥಾನಕ್ಕೆ ತಿರುಗಿಸಿ, ʻಸ್ಟಾರ್ಟ್ʼ ಗುಂಡಿಯನ್ನು ಅನ್ನು ಒತ್ತುವ ಮೂಲಕ ಕೀಲಿಯನ್ನು ಜೇಬಿನಿಂದ ಹೊರತೆಗೆಯದೆಯೇ ವಾಹನವನ್ನು ಸರಾಗವಾಗಿ ಪ್ರಾರಂಭಿಸಬಹುದು.
ಸ್ಮಾರ್ಟ್ ಸೇಫ್: ʻಆಕ್ಟಿವಾ 2023ʼ ವಾಹನವು ಮ್ಯಾಪ್ ಮಾಡಲಾದ ʻಸ್ಮಾರ್ಟ್ ಇಸಿಯುʼ ಅನ್ನು ಹೊಂದಿದೆ. ಇದು ʻಇಸಿಯುʼ ಮತ್ತು ʻಸ್ಮಾರ್ಟ್ ಕೀʼ ಸಂಕೇತದ ನಡುವೆ ಸಾಮ್ಯತೆಯನ್ನು ವಿದ್ಯುನ್ಮಾನವಾಗಿ ಹೋಲಿಕೆ (ಐಡಿ) ಮಾಡುವ ಮೂಲಕ ಭದ್ರತಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಆ ಮೂಲಕ ವಾಹನ ಕಳ್ಳತನವನ್ನು ತಡೆಯುತ್ತದೆ. ʻಸ್ಮಾರ್ಟ್ ಕೀʼ, ʻಇಮ್ಮೊಬಲೈಜರ್ʼ ವ್ಯವಸ್ಥೆಯನ್ನು ಹೊಂದಿದೆ. ಇದು ನೋಂದಾಯಿತವಲ್ಲದ ಕೀಲಿಯ ಮೂಲಕ ಎಂಜಿನ್ ಚಾಲೂಗೊಳ್ಳದಂತೆ ತಡೆಯುತ್ತದೆ. ʻಸ್ಮಾರ್ಟ್ ಕೀʼ ಮೂಲಕ ಸುರಕ್ಷಿತ ಸಂಪರ್ಕವಿಲ್ಲದ ಹೊರತು, ವಾಹನವನ್ನು ಸಕ್ರಿಯಗೊಳಿಸಲು ʻಇಮ್ಮೊಬಲೈಜರ್ʼ ಅನುಮತಿಸುವುದಿಲ್ಲ.
ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್: ಈ ವೈಶಿಷ್ಟ್ಯವು ದ್ವಿಮುಖ ಕಾರ್ಯನಿರ್ವಹಣೆಯ ಸ್ವಿಚ್ ಮೂಲಕ ಕಾರ್ಯನಿರ್ವಹಿಸುತ್ತದೆ. ಸ್ವಿಚ್ ಅನ್ನು ಕೆಳಗೆ ಒತ್ತಿದಾಗ ಎಂಜಿನ್ ಚಾಲುಗೊಳ್ಳುತ್ತದೆ. ಇದೇ ಸ್ವಿಚ್ ಅನ್ನು ಮೇಲಕ್ಕೆ ಒತ್ತುವ ಮೂಲಕ ಎಂಜಿನ್ ನಿಷ್ಕ್ರಿಯಗೊಳಿಸಬಹುದು.
ಹೆಚ್ಚಿನ ಅನುಕೂಲತೆ ಒದಗಿಸಲು ಸೀಟ್ ಅಡಿಯಲ್ಲಿ ಇರುವ 18 ಲೀಟರ್ ಸ್ಟೋರೇಜ್ ಜಾಗವನ್ನು ಪ್ರವೇಶಿಸಲು ವಿಶಿಷ್ಟವಾದ ʻಡಬಲ್ ಲಿಡ್ ಫ್ಯೂಯಲ್ ಓಪನಿಂಗ್ ಸಿಸ್ಟಮ್ʼ ಅನ್ನು ಇದು ಒಳಗೊಂಡಿದೆ. ಲಾಕ್ ಮೋಡ್ (5 ಇನ್ 1 ಲಾಕ್) ಮೂಲಕ ಸವಾರರಿಗೆ ಗರಿಷ್ಠ ಅನುಕೂಲತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ.
ಇದರ ದೊಡ್ಡ ಫ್ಲೋರ್ ಸ್ಪೇಸ್, ಲಗೇಜ್ ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಹೆಚ್ಚು ದೂರದ ಸವಾರಿಯನ್ನು ಆರಾಮವಾಗಿಸುತ್ತದೆ. ಜೊತೆಗೆ, ಇದರ ಲಾಂಗ್ ವ್ಹೀಲ್ ಬೇಸ್, ಉತ್ತಮ ಸ್ಥಿರತೆ ಮತ್ತು ಸಮತೋಲನದೊಂದಿಗೆ ಅಹಿತಕರ ಮತ್ತು ಕೆಟ್ಟ ರಸ್ತೆಗಳಲ್ಲಿ ಉತ್ತಮ ಸವಾರಿ ಗುಣಮಟ್ಟವನ್ನು ಖಚಿತಪಡಿಸುತ್ತದೆ.
ʻಡಿ.ಸಿ. ಎಲ್‌ಇಡಿ ಹೆಡ್‌ಲ್ಯಾಂಪ್ʼ ನಿರಂತರ ಬೆಳಕಿನಿಂದ ಒರಟಾದ ರಸ್ತೆಗಳಲ್ಲಿ ಮತ್ತು ರಾತ್ರಿಯಲ್ಲಿ ಕಡಿಮೆ ವೇಗದಲ್ಲಿ ಸವಾರಿ ಮಾಡುವುದು ಹೆಚ್ಚು ಅನುಕೂಲಕರವಾಗಿದೆ. ಇದರ ʻಪಾಸಿಂಗ್ ಸ್ವಿಚ್ʼ, ಹೈಬೀಮ್ / ಲೋಬೀಮ್ ಅನ್ನು ನಿಯಂತ್ರಿಸುವ ಮತ್ತು ಒಂದೇ ಸ್ವಿಚ್‌ನಿಂದ ಸಿಗ್ನಲ್ ಅನ್ನು ರವಾನಿಸುವ ಅನುಕೂಲವನ್ನು ಒದಗಿಸುತ್ತದೆ.
ʻಆಕ್ಟಿವಾ 2023ʼ ಸ್ಕೂಟರ್ ಮೂರು ಆವೃತ್ತಿಗಳಲ್ಲಿ (ಸ್ಟ್ಯಾಂಡರ್ಡ್, ಡೀಲಕ್ಸ್ ಮತ್ತು ಸ್ಮಾರ್ಟ್), 6 ಬಣ್ಣಗಳ ಆಯ್ಕೆಯಲ್ಲಿ (ಪರ್ಲ್ ಸೈರನ್ ಬ್ಲೂಹೊಸತು, ಡಿಸೆಂಟ್ ಬ್ಲೂ ಮೆಟಾಲಿಕ್, ರೆಬೆಲ್ ರೆಡ್ ಮೆಟಾಲಿಕ್, ಬ್ಲ್ಯಾಕ್, ಪರ್ಲ್ ಪ್ರಿಷಿಯಸ್ ವೈಟ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್) ಲಭ್ಯವಿದೆ.