HomeLatest Newsಇಬ್ಬರು ಪತ್ನಿಯರಿದ್ದರೂ ಮೂರನೆಯವಳೊಂದಿಗೆ ಲಿವ್-ಇನ್ ಸಂಬಂಧ: ಸಂಗಾತಿಯನ್ನೇ ಕೊಲೆಗೈದು ಸುಟ್ಟು ಹಾಕಿದ ಕ್ರೂರಿ

ಇಬ್ಬರು ಪತ್ನಿಯರಿದ್ದರೂ ಮೂರನೆಯವಳೊಂದಿಗೆ ಲಿವ್-ಇನ್ ಸಂಬಂಧ: ಸಂಗಾತಿಯನ್ನೇ ಕೊಲೆಗೈದು ಸುಟ್ಟು ಹಾಕಿದ ಕ್ರೂರಿ

ಝಾನ್ಸಿ: ಇಬ್ಬರು ಹೆಂಡತಿಯರಿದ್ದರೂ ಇನೋರ್ವ ಯುವತಿಯ ಸಹವಾಸ ಮಾಡಿದ ವ್ಯಕ್ತಿ ಆಕೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದು ಲಿವ್-ಇನ್- ಗೆಳತಿಯನ್ನು ಬರ್ಬರವಾಗಿ ಹತ್ಯೆಗೈದು ಸುಟ್ತು ಹಾಕಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ನಿವೃತ್ತ ರೈಲ್ವೆ ಸಿಬ್ಬಂದಿಯಾಗಿದ್ದ ಆರೋಪಿ ರಾಮ್ ಸಿಂಗ್ ತನ್ನ ಲಿವ್-ಇನ್ ಗೆಳತಿಯನ್ನೇ ಕೊಲೆ ಗೈದು ಲೋಹದ ಟ್ರಂಕ್ ಒಳಗೆ ಹಾಕಿ ಶವವನ್ನು ಸುಟ್ಟು, ಚಿತಾ ಭಸ್ಮವನ್ನು ನದಿಗೆ ಎಸೆದಿದ್ದಾನೆ. ಆದಾಗ್ಯೂ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಮ್ ಸಿಂಗ್ ಅದಾಗಲೇ ಎರಡು ಮದುವೆಯಾಗಿದ್ದು, ಇಬ್ಬರು ಪತ್ನಿಯರೂ ಇದ್ದಾರೆ. ಆದರೂ ಇನ್ನೋರ್ವಳೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದ. ಇಬ್ಬರ ನಡುವೆ ಗಲಾಟೆಯಾಗಿ ರಾಮ್ ಸಿಂಗ್ ಲಿವ್-ಇನ್ ಸಂಗಾತಿಯನ್ನು ಜನವರಿ 8ರಂದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಟಾರ್ಪಾಅಲ್ ನಲ್ಲಿ ಸುತ್ತಿ ಕೆಲ ಸಮಯದವರೆಗೆ ಶವವನ್ನು ಮರೆ ಮಾಚಿದ್ದ.

ಬಳಿಕ ಒಂದು ನೀಲಿ ಟ್ರಂಕ್ ತಂದು ಶವವನ್ನು ಪೆಟ್ಟಿಗೆಯಲ್ಲಿ ಇಟ್ಟು ಬೆಂಕಿ ಹಚ್ಚಿದ್ದಾನೆ. ಶವ ಸಂಪೂರ್ಣ ಸುಟ್ಟ ಬಳಿಕ ಸಾಕ್ಷ್ಯ ನಾಶಪಡಿಸಲು ಚಿತಾ ಭಸ್ಮವನ್ನು ನದಿಗೆ ಎಸೆದಿದ್ದಾನೆ. ಚಿತಾ ಭಸ್ಮದ ಟ್ರಂಕ್ ಸಾಗಿಸಲು ಬಾಡಿಗೆ ವಾಹನವನ್ನು ತನ್ನ ಮಗನ ಸಹಾಯದಿಂದ ಪಡೆದುಕೊಂಡಿದ್ದಾನೆ. ಲೋಡರ್ ವಾಹನವನ್ನು ತನ್ನ ಎರಡನೇ ಹೆಂಡತಿ ಮನೆಗೆ ಕಳುಹಿಸಿದ್ದಾನೆ. ಸಾಗಾಣೆ ವೇಳೆ ಪೆಟ್ಟಿಗೆಯಿಂದ ನೀರು ಸೋರುತ್ತಿತ್ತು. ಇದು ಲೋಡರ್ ಚಾಲಕನ ಅನುಮಾನಕ್ಕೆ ಕಾರಣವಾಗಿತ್ತು. ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕಾಗಮಿಸಿದ ಪೊಲೀಸರು ರಾಮ್ ಸಿಂಗ್ ನ ಎರಡನೇ ಪತ್ನಿಯ ಮನೆ ಪರಿಶೀಲಿಸಿದಾಗ ಪೆಟ್ಟಿಗೆಯೊಂದು ಪತ್ತೆಯಾಗಿದ್ದು, ಅದನ್ನು ತೆರೆದು ನೋಡಿದಾಗ ಸುಟ್ಟ ಮಾನವನ ಮೂಳೆ, ಕಲ್ಲಿದಲಿನಂತಹ ವಸ್ತುಗಳು ಪತ್ತೆಯಾಗಿವೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular