HomeKarnatakaBig News: ದಾವಣಗೆರೆ ದಕ್ಷಿಣ ಉಪ ಚುನಾವಣೆ: ಯುವ ನಾಯಕ ವಿನಯ್ ಕುಮಾರ್ ಮಹತ್ವದ ಘೋಷಣೆ

Big News: ದಾವಣಗೆರೆ ದಕ್ಷಿಣ ಉಪ ಚುನಾವಣೆ: ಯುವ ನಾಯಕ ವಿನಯ್ ಕುಮಾರ್ ಮಹತ್ವದ ಘೋಷಣೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಕಣದ ಬಿಸಿ ಏರುತ್ತಿದೆ. ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಯಾರು? ಎಂಬ ಚರ್ಚೆ ಜೋರಾಗಿದೆ.

ಯುವ ನಾಯಕ ಜಿ.ಬಿ.ವಿನಯ್ ಕುಮಾರ್ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಕುರಿತು ಮಾತನಾಡಿದ್ದಾರೆ. “ದಾವಣಗೆರೆ ದಕ್ಷಿಣ ಕ್ಷೇತ್ರ ಕುಟುಂಬ ರಾಜಕಾರಣದಿಂದ ದೂರವಾಗಬೇಕು” ಎಂದು ಹೇಳುವ ಮೂಲಕ ಶಾಮನೂರು ಶಿವಶಂಕರಪ್ಪ ಕುಟುಂಬ ಸದಸ್ಯರಿಗೆ ಟಿಕೆಟ್ ಬೇಡ ಎಂದು ಹೇಳಿದ್ದಾರೆ.

“ಇವರ ಕುಟುಂಬದವರು ಟಿಕೆಟ್ ತೆಗೆದುಕೊಂಡು ಬರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಟಿಕೆಟ್ ಕೊಡಿಸಿ ಬಿಜೆಪಿಯಿಂದ ಶಾಮನೂರು ಶಿವಶಂಕರಪ್ಪ ಕುಟುಂಬದವರು ಟಿಕೆಟ್ ಪಡೆಯಬಹುದು ಎಂಬ ಸುದ್ದಿಗಳು ಹಬ್ಬಿವೆ” ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಒಂದು ವೇಳೆ ಶಾಮನೂರು ಶಿವಶಂಕರಪ್ಪ ಕುಟುಂಬದವರು ಟಿಕೆಟ್ ತೆಗೆದುಕೊಂಡು ಬಂದರೆ ನಾವು ಸ್ವಾಭಿಮಾನಿ ಬಳಗದಿಂದ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಇಲ್ಲವೇ ಕೆಲವು ಮುಸ್ಲಿ ಮುಖಂಡರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇವೆ ಎಂದು ಹೇಳುತ್ತಿದ್ದು, ಅವರಿಗೆ ಬೆಂಬಲ ನೀಡುತ್ತೇವೆ” ಎಂದು ಜಿ.ಬಿ.ವಿನಯ್ ಕುಮಾರ್ ಘೋಷಣೆ ಮಾಡಿದರು.

ಕುಟುಂಬ ರಾಜಕಾರಣ ಬೇಡ: “ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣ ದಾವಣಗೆರೆ ಕ್ಷೇತ್ರದಲ್ಲಿ ಮುಂದುವರೆಲು ಅವಕಾಶ ನೀಡುವುದಿಲ್ಲ. ಇದು ನಮ್ಮ ಸ್ವಾಭಿಮಾನಿ ಬಳಗದ ಧ್ಯೇಯ ಎಂದು ಹೇಳಬಹುದು ಅಥವ ದಾವಣಗೆರೆ ಜನರಿಗೆ ನಮ್ಮ ಭರವಸೆ ಎಂದು ಹೇಳಬಹುದು” ಎಂದರು.

“ನಮ್ಮ ತೀರ್ಮಾನದಿಂದ ಬಿಜೆಪಿಗೆ ಲಾಭವಾದರೆ ಆಗಲಿ. ನಾವು ನೇರವಾಗಿ ಸಪೋರ್ಟ್ ಮಾಡುವುದಿಲ್ಲ. ಕುಟುಂಬ ರಾಜಕಾರಣ ಅಂತ್ಯವಾಗಬೇಕು ಎನ್ನುವುದು ಮಾತ್ರ ನಮ್ಮ ಉದ್ದೇಶ” ಎಂದು ಹೇಳಿದರು.

“ಒಬ್ಬ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಚುನಾವಣೆ ನಡೆಸುವ ಸಾಮರ್ಥ್ಯ ನಮ್ಮ ಬಳಿ ಇದೆ. ನಾವು ಆ ರೀತಿ ಮಾಡುತ್ತೇವೆಯೇ ಹೊರತು ನೇರವಾಗಿ ಬೇರೆ ಬೇರೆ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ” ಎಂದು ವಿನಯ್ ಕುಮಾರ್ ಸ್ಪಷ್ಟಪಡಿಸಿದರು.

ಟಿಕೆಟ್ ಕೇಳಿಲ್ಲ: “ನಾನು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಯಲ್ಲ. ನಾನು ಯಾರ ಬಳಿಯೂ ಹೋಗಿ ಟಿಕೆಟ್ ಕೇಳಿಲ್ಲ. ಟಿಕೆಟ್‌ಗೆ ಪ್ರಯತ್ನ ಮಾಡಿಲ್ಲ. ಯಾವುದೇ ನಾಯಕರನ್ನು ಭೇಟಿ ಮಾಡಿಲ್ಲ” ಎಂದು ವಿನಯ್ ಕುಮಾರ್ ಸ್ಪಷ್ಟನೆ ನೀಡಿದರು.

“ನಾನು ಚುನಾವಣೆಗೆ ನಿಲ್ಲಬೇಕು ಎಂದು ಜನರ ಅಪೇಕ್ಷೆ ಇದೆ. ಅದು ಪಕ್ಷಗಳಿಗೆ ಬಿಟ್ಟ ವಿಚಾರವಾಗಿದೆ. ಅದು ಕಾಂಗ್ರೆಸ್ ಇರಬಹುದು ಅಥವ  ಬಿಜೆಪಿ ಇರಬಹುದು. ಇದನ್ನು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ” ಎಂದು ತಿಳಿಸಿದರು.

“ನಾನು ಈಗ ತಟಸ್ಥನಾಗಿದ್ದೇನೆ. ಕ್ಷೇತ್ರ ಅಭಿವೃದ್ಧಿ ಮಾಡಲು ನಮಗೆ ಬೇಕಿರುವುದು ರಾಜಕೀಯ ಅಧಿಕಾರ. ನಾನು ಸೂಕ್ತ ಅಭ್ಯರ್ಥಿ ಎಂದು ಪಕ್ಷಗಳು ಟಿಕೆಟ್ ನೀಡುವುದಾದರೆ ನಾನು ಮಾನಸಿಕವಾಗಿಯೂ ಸಿದ್ಧನಾಗಿದ್ದೇನೆ. ಆದರೆ ಈಗ ನಾನು ಆಕಾಂಕ್ಷಿಯಲ್ಲ. ಅಲ್ಲಿರುವ ಕಾರ್ಯಕರ್ತರು, ಕೆಲಸ ಮಾಡಿದವರು, ಜನರ ವಿಶ್ವಾಸಗಳಿಸಿದವರಿಗೆ ಟಿಕೆಟ್ ನೀಡಲಿ” ಎಂದರು.

ಜಿ.ಬಿ.ವಿನಯ್‌ ಕುಮಾರ್ ಯವ ರಾಜಕೀಯ ನಾಯಕ ಮತ್ತು ಇನ್‌ಸೈಟ್ಸ್‌ ಐಎಎಸ್‌ ಕೋಚಿಂಗ್ ಸೆಂಟರ್‌ನ ಸ್ಥಾಪಕ. ದಾವಣಗೆರೆಯಲ್ಲಿ ಅವರು ಸ್ವಾಭಿಮಾನಿ ಬಳಗ ಎಂದ ಯವ ಪಡೆಯನ್ನು ಹೊಂದಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಅವರು ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು 42,907 ಮತಗಳನ್ನು ಪಡೆದು ಸೋಲು ಕಂಡಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular