HomeEntertainmentಸಖತ್ ಕ್ಯೂಟ್ ಆಗಿದೆ ಪುಟ್ಟ ಬಾಲೆಯ 'ಜಸ್ಟ್ ಲುಕಿಂಗ್ ಲೈಕ್ ವಾವ್’ ವಿಡಿಯೋ

ಸಖತ್ ಕ್ಯೂಟ್ ಆಗಿದೆ ಪುಟ್ಟ ಬಾಲೆಯ ‘ಜಸ್ಟ್ ಲುಕಿಂಗ್ ಲೈಕ್ ವಾವ್’ ವಿಡಿಯೋ

little girl

ಇನ್ಸ್ಟಾಗ್ರಾಂ ನಲ್ಲೀಗ ‘ಜಸ್ಟ್ ಲುಕಿಂಗ್ ಲೈಕ್ ವಾವ್’ ನದ್ದೇ ಟ್ರೆಂಡ್‌. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಜಸ್ಟ್ ಲುಕಿಂಗ್ ಲೈಕ್ ವಾವ್ ಎಂದು ರೀಲ್ಸ್ ಮಾಡ್ತಿದ್ದಾರೆ. ಈ ಮಧ್ಯೆ ಪುಟ್ಟ ಹುಡುಗಿಯೊಬ್ಬಳ ಮುದ್ದಾದ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ನೆರಿಯಾ ಖಾರ್ಕೊಂಗೊರ್ ಎಂಬ ಹುಡುಗಿ ಬೆಚ್ಚಗಿನ ಚಳಿಗಾಲದ ಬಟ್ಟೆಗಳನ್ನು ಧರಿಸಿದ್ದಾಳೆ. ಇಂಟರ್ನೆಟ್ ಸೆನ್ಸೇಷನ್ ಜಾಸ್ಮೀನ್ ಕೌರ್ ಅವರ ಜನಪ್ರಿಯ ‘ಜಸ್ಟ್ ಲುಕಿಂಗ್ ಲೈಕ್ ವಾವ್’ ಸಂಭಾಷಣೆಯನ್ನು ಮರುಸೃಷ್ಟಿಸಿದ್ದಾಳೆ. ‘ಲುಕಿಂಗ್ ಲೈಕ್ ವಾವ್’ಪೂರ್ತಿ ಸಂಭಾಷಣೆಯನ್ನು ಆಕೆ ನೆನಪಿಸಿಕೊಂಡಿದ್ದಲ್ಲದೆ ಅದನ್ನು ಹೇಳುತ್ತಾ ಕೆಲವು ಅಭಿವ್ಯಕ್ತಿಗಳನ್ನು ತೋರಿಸಿದ್ದಾಳೆ. ಅದು ತುಂಬಾ ಮುದ್ದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿಸೆಂಬರ್ 12 ರಂದು ಪೋಸ್ಟ್ ಮಾಡಿದ ನಂತರ ವೀಡಿಯೊ 1.6 ಮಿಲಿಯನ್ ಲೈಕ್ಸ್ ಮತ್ತು 22 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು, ಸಹಜವಾಗಿ ನೆರಿಯಾಳ ‘ಜಸ್ಟ್ ಲುಕಿಂಗ್ ವಾವ್’ ವೀಡಿಯೊವನ್ನು ಇಷ್ಟಪಟ್ಟಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ‘ಜಸ್ಟ್ ಲುಕಿಂಗ್ ಲೈಕ್ ವಾವ್’ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular