HomeKarnatakaಸ್ನೇಹಿತನಿಂದಲೇ ನಿವೃತ್ತ ASI ಪುತ್ರನ ಬರ್ಬರ ಹತ್ಯೆ

ಸ್ನೇಹಿತನಿಂದಲೇ ನಿವೃತ್ತ ASI ಪುತ್ರನ ಬರ್ಬರ ಹತ್ಯೆ

ರಾಮನಗರ: ಸ್ನೇಹಿತನಿಂದಲೇ ನಿವೃತ್ತ ಎ ಎಸ್ ಐ ಪುತ್ರನೊಬ್ಬ ಕೊಲೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಕೆರೆದೊಡ್ಡಿ ಗ್ರಾಮದಲ್ಲಿ ನಡೆದಿದೆ.

ದೀಪಕ್ (23) ಕೊಲೆಯಾದ ದುರ್ದೈವಿ. ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ. ಮನೆ ಕಟ್ಟಿಸುತ್ತಿದ್ದೇನೆ ಖುಷಿಗೆ ಪಾರ್ಟಿ ಕೊಡಿಸುತ್ತೇನೆ ಎಂದು ದೀಪಕ್ ನನ್ನು ಕರೆದಿದ್ದ ಸ್ನೇಹಿತ ಪ್ರಸಾದ್. ಸ್ನೇಹಿತನ ಪಾರ್ಟಿಗೆ ದೀಪಕ್ ತೆರಳಿದ್ದ. ಈ ವೇಳೆ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ. ಸರಿಯಾಗಿ ಪೆಗ್ ಹಾಕಲು ಬರಲ್ಲ ಎಂದು ಸರಿಯಾಗಿ ಪೆಗ್ ಹಾಕು ಎಂದು ದೀಪಕ್ ಪ್ರಸಾದ್ ಕೆನ್ನೆಗೆ ಹೊಡೆದಿದ್ದಾನೆ. ಇದರಿಂದ ಅವಮಾನಿತನಾಗಿ ಪ್ರಸಾದ್ ಕೋಪಗೊಂಡಿದ್ದ. ಆದರೂ ಪಾರ್ಟಿ ಮುಗಿಯುವವರೆಗೂ ತೋರಿಸಿಕೊಂಡಿಲ್ಲ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಡರಾತ್ರಿ ಭರ್ಜರಿ ಪಾರ್ಟಿಯಲ್ಲಿ ಕಂಠ ಪೂರ್ತಿ ಕುಡಿದು ಸ್ನೇಹಿತರು ಮಲಗಿದ್ದಾರೆ. ಈ ವೇಳೆ ಪ್ರಸಾದ್, ದೀಪಕ್ ತಲೆಗೆ ಇಟ್ಟಿಗೆಯಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular