HomeKarnatakaಸರ್ಕಾರಿ ನೌಕರರಿಗೆ ಕೇಂದ್ರ ಸ್ಥಾನದಲ್ಲಿ ವಾಸ ಕಡ್ಡಾಯ: ರಾತ್ರಿ ಪಾಳಿ ಹಾಜರಾತಿಗೂ ಕರ್ತವ್ಯ ಆ್ಯಪ್

ಸರ್ಕಾರಿ ನೌಕರರಿಗೆ ಕೇಂದ್ರ ಸ್ಥಾನದಲ್ಲಿ ವಾಸ ಕಡ್ಡಾಯ: ರಾತ್ರಿ ಪಾಳಿ ಹಾಜರಾತಿಗೂ ಕರ್ತವ್ಯ ಆ್ಯಪ್

ಬೆಂಗಳೂರು: “ಕರ್ತವ್ಯ” ನಿರ್ವಹಣೆಯಲ್ಲಿ ಹೊಣೆಗಾರಿಕೆ ತರಲು ಡಿಜಿಟಲ್‌ ಹಾಜರಾತಿಗೆ ಆದ್ಯತೆ ನೀಡಲಾಗಿದೆ. ವೇತನ ಪಾವತಿಯಲ್ಲಿ ಪಾರದರ್ಶಕತೆ ತರಲಾಗಿದೆ.

ರಾಜ್ಯದ ವಿವಿಧ ಇಲಾಖೆಗಳು, ಕಚೇರಿಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ‘ಕರ್ತವ್ಯ’ ಆ್ಯಪ್‌ ಮೂಲಕ ಹಾಜರಾತಿ ಕಡ್ಡಾಯಗೊಳಿಸಲಾಗಿದೆ.

ನವೆಂಬರ್‌ 25ರೊಳಗೆ ಎಲ್ಲ ನೌಕರರ ನೋಂದಣಿ ಪೂರ್ಣಗೊಳಿಸಿ, ಡಿಸೆಂಬರ್‌ 1ರಿಂದ ಆ್ಯಪ್‌ ಮೂಲಕವೇ ಹಾಜರಾತಿ ದಾಖಲಿಸಲು ಸೂಚಿಸಲಾಗಿದೆ. ಜನವರಿ 1ರಿಂದ ಡಿಜಿಟಲ್‌ ಹಾಜರಾತಿ ವರದಿಯ ಆಧಾರದಲ್ಲೇ ವೇತನ ಹಾಗೂ ಏಜೆನ್ಸಿಗಳ ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರಿ ಆಡಳಿತದಲ್ಲಿ ಶಿಸ್ತು, ಹೊಣೆಗಾರಿಕೆ ಮತ್ತು ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಜಾರಿಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನಸೇವೆಗೆ ಸದಾ ಸನ್ನದ್ಧತೆ, “ಕರ್ತವ್ಯ” ನಿರ್ವಹಣೆಯಲ್ಲಿ ಹೊಣೆಗಾರಿಕೆ

ರಾಜ್ಯದ ಸರ್ಕಾರಿ ನೌಕರರು ತಮ್ಮ ಕರ್ತವ್ಯದ ಕೇಂದ್ರಸ್ಥಾನದಲ್ಲಿಯೇ ವಾಸಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳು ಲಭ್ಯವಾಗುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

 ನವೆಂಬರ್‌ 1ರಿಂದ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ರಾತ್ರಿ 9 ಗಂಟೆಯ ನಂತರ ‘ಕರ್ತವ್ಯ’ ಆ್ಯಪ್‌ ಮೂಲಕ ರಾತ್ರಿ ಹಾಜರಾತಿ ದಾಖಲಿಸುವುದು ಕಡ್ಡಾಯ. ರಜೆಯಲ್ಲಿರುವ ಹಾಗೂ ಪೂರ್ವಾನುಮತಿ ಪಡೆದಿರುವ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದ್ದು, ಪ್ರತಿ ತಿಂಗಳು ಹಾಜರಾತಿ ವರದಿ ಪರಿಶೀಲಿಸಲಾಗುತ್ತದೆ. ಕೇಂದ್ರಸ್ಥಾನದಲ್ಲಿ ವಾಸಿಸದ ಅಧಿಕಾರಿಗಳ ವಿರುದ್ಧ ನಾಗರಿಕ ಸೇವಾ ನಿಯಮಗಳಡಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ.

ಸರ್ಕಾರಿ ನೌಕರರಿಗೆ ಕೇಂದ್ರಸ್ಥಾನದಲ್ಲಿ ವಾಸ ಕಡ್ಡಾಯ ರಾತ್ರಿ ಪಾಳಿ ಹಾಜರಾತಿಗೂ ‘ಕರ್ತವ್ಯ’ ಆ್ಯಪ್

ರಾಜ್ಯ ಸರ್ಕಾರದ ಎಲ್ಲ ನೌಕರರು ತಮ್ಮ ಕೇಂದ್ರಸ್ಥಾನದಲ್ಲಿಯೇ ವಾಸವಿರುವುದು ಕಡ್ಡಾಯಗೊಳಿಸಿ ಆದೇಶ.

ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ವೈದ್ಯರಿಗೆ ನವೆಂಬ‌ರ್ 1ರಿಂದ ರಾತ್ರಿ ಹಾಜರಾತಿ ಕಡ್ಡಾಯ.

ರಾತ್ರಿ 9 ಗಂಟೆಯ ನಂತರ ‘ಕರ್ತವ್ಯ’ ಆಯಪ್ ಮೂಲಕ ರಾತ್ರಿ ಹಾಜರಾತಿ ದಾಖಲು

ರಜೆಯಲ್ಲಿರುವ ಹಾಗೂ ಪೂರ್ವಾನುಮತಿ ಪಡೆದಿರುವ ಸಿಬ್ಬಂದಿಗೆ ರಾತ್ರಿ ಹಾಜರಾತಿಯಿಂದ ವಿನಾಯಿತಿ.

ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಪ್ರತಿ ತಿಂಗಳು ರಾತ್ರಿ ಹಾಜರಾತಿ ವರದಿ ಪರಿಶೀಲನೆ.

ಕೇಂದ್ರಸ್ಥಾನದಲ್ಲಿ ವಾಸವಿರದ ಅಧಿಕಾರಿಗಳ ವಿರುದ್ಧ ನಾಗರಿಕ ಸೇವಾ ನಿಯಮಗಳಡಿ ಶಿಸ್ತುಕ್ರಮ

ವಿವಿಧ ಇಲಾಖೆಗಳು, ಕಚೇರಿಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು, ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನ್ವಯ

ಖಾಯಂ ಸರ್ಕಾರಿ ನೌಕರರಿಗೆ ಸೀಮಿತವಾಗಿದ್ದ ‘ಕರ್ತವ್ಯ’ ಆ್ಯಪ್, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ವಿಸ್ತರಣೆ.

ನವೆಂಬ‌ರ್ 25ರೊಳಗೆ ಎಲ್ಲ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಆ್ಯಪ್‌ನಲ್ಲಿ ನೋಂದಾಯಿಸಲು ನಿರ್ದೇಶನ.

ಡಿಸೆಂಬರ್ 1ರಿಂದ ಆ್ಯಪ್ ಮೂಲಕವೇ ಹಾಜರಾತಿ ಕಡ್ಡಾಯ.

ಜನವರಿ 1ರಿಂದ ಡಿಜಿಟಲ್ ಹಾಜರಾತಿ ವರದಿಯ ಆಧಾರದಲ್ಲೇ ವೇತನ, ಏಜೆನ್ಸಿಗಳ ಬಿಲ್ ಪಾವತಿ.

ರಾಜ್ಯದಲ್ಲಿ ಹೂಡಿಕೆ, ತಂತ್ರಜ್ಞಾನ, ಕೈಗಾರಿಕಾ ಸಹಕಾರ: ಸ್ವೀಡನ್, ಪೋಲೆಂಡ್ ಪ್ರತಿನಿಧಿಗಳೊಂದಿಗೆ ಮಹತ್ವದ ಚರ್ಚೆ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular