ವರ್ಲ್ಡ್ ಸ್ಟ್ಯಾಂಡರ್ಡ್ಸ್ ವೆಬ್‌ಸೈಟ್ ಪ್ರಕಾರ, ವಿಶ್ವದ ಜನಸಂಖ್ಯೆಯ 35 ಪ್ರತಿಶತದಷ್ಟು ಜನರು ಎಡಭಾಗದಲ್ಲಿ ಚಾಲನೆ ಮಾಡುತ್ತಾರೆ ಎಂದು ಹೇಳಿದೆ. ಈ ನಿಯಮವನ್ನು ಅನುಸರಿಸುವ ಹೆಚ್ಚಿನ ದೇಶಗಳು ಹಳೆಯ ಬ್ರಿಟಿಷ್ ವಸಾಹತುಗಳಾಗಿವೆ. ಹೀಗಾಗಿ ನಮ್ಮ ದೇಶದಲ್ಲೂ ಕೂಡ ಎಡಭಾಗದ ಟ್ರಾಫಿಕ್ ಸಂಚಾರ ವ್ಯವಸ್ಥೆಯೇ ಇದೆ. ಗ್ರೇಟ್ ಬ್ರಿಟನ್, ಐರ್ಲೆಂಡ್, ಮಾಲ್ಟಾ, ಬ್ರೂನಿ, ಬಾರ್ಬಡೋಸ್, ಸಿಂಗಾಪುರ, ಥೈಲ್ಯಾಂಡ್, ಜಪಾನ್, ಭಾರತ, ಆಸ್ಟ್ರೇಲಿಯಾದಲ್ಲಿ ಈ ಸಂಚಾರ ವ್ಯವಸ್ಥೆಯನ್ನು ಇಂದಿಗೂ ಪಾಲಿಸಲಾಗುತ್ತಿದೆ.
ಎಡಭಾಗದಲ್ಲಿ ಸಂಚಾರ ಅನುಸರಿಸುವ ಅಭ್ಯಾಸವು ಬ್ರಿಟಿಷರ ಕಾಲಕ್ಕೂ ಹಿಂದಿನಿಂದಲೂ ಬಂದಿದೆ. ಈ ವಿಚಿತ್ರ ಆಚರಣೆಗೆ ಕಾರಣ ಕೂಡ ಇದೆ. ಹಿಂದೆಲ್ಲಾ ಖಡ್ಗಧಾರಿಗಳು ರಸ್ತೆಯ ಎಡಭಾಗದಲ್ಲಿ ಪ್ರಯಾಣಿಸುತ್ತಿದ್ದರು. ಏಕೆಂದರೆ ಅವರಲ್ಲಿ ಹೆಚ್ಚಿನವರು ಬಲಗೈಯವರಾಗಿದ್ದರು. ಆದ್ದರಿಂದ, ತಮ್ಮ ಬಲಗೈ ಎದುರಾಳಿಗೆ ಹತ್ತಿರವಾಗಲು ಮತ್ತು ಯಾವುದೇ ಹಠಾತ್ ದಾಳಿಯನ್ನು ತಪ್ಪಿಸಲು ಕತ್ತಿಯನ್ನು ಎಡಭಾಗದಲ್ಲಿ ಇರಿಸಲು ಆದ್ಯತೆ ನೀಡಲಾಯಿತು.
ಇನ್ನೊಂದು ಕಾರಣ ಕೂಡ ಇದೆ. ಅದೇನಂದರೆ, ಕುದುರೆ ಸವಾರರು ಕುದುರೆಯನ್ನು ಎಡಭಾಗದಿಂದ ಏರಲು ಬಯಸುತ್ತಾರೆ. ಆದ್ದರಿಂದ ಕುದುರೆಯನ್ನು ಏರಲು ಎಡಭಾಗದಲ್ಲಿದ್ದರೆ, ಅದನ್ನು ಎಡಭಾಗದಲ್ಲಿ ಮಾತ್ರ ಸವಾರಿ ಮಾಡಬೇಕು.
ಇನ್ನು, ರಾಣಿ ಎಲಿಜಬೆತ್ ಕಾಲದಲ್ಲಿ ರಾಜಮನೆತನದ ಸದಸ್ಯರು ಮಾತ್ರ ಎಡಭಾಗದಲ್ಲಿ ಪ್ರಯಾಣಿಸುತ್ತಿದ್ದರು. ಸಾರ್ವಜನಿಕರು ಬಲಬದಿಯಲ್ಲಿ ನಡೆಯಬೇಕಿತ್ತು. ಈ ಎಲ್ಲಾ ಅಂಶಗಳು ಎಡಭಾಗದಲ್ಲಿ ಚಾಲನೆ ಮಾಡುವ ನಿಯಮಗಳಿಗೆ ಕಾರಣವಾಯಿತು.
ಇನ್ನು ಫ್ರಾನ್ಸ್ ದೇಶದಲ್ಲಿ 1789 ರ ಫ್ರೆಂಚ್ ಕ್ರಾಂತಿಯ ನಂತರ ಅಧಿಕಾರವಿಲ್ಲದವರಿಗೆ, ಬಲಭಾಗದಲ್ಲಿ ಚಾಲನೆ ಮಾಡುವ ನಿಯಮವನ್ನು ಜಾರಿಗೆ ತರಲಾಯಿತು, ಜನರು ಅಧಿಕಾರವನ್ನು ಪಡೆಯಲು ಪ್ರಾರಂಭಿಸಿದಾಗ, ರಾಜಮನೆತನವು ಸಾಮಾನ್ಯ ಜನರೊಂದಿಗೆ ಬಲಭಾಗದಲ್ಲಿ ಸಂಚರಿಸುವಂತೆ ಒತ್ತಾಯಿಸಲಾಯಿತು. ಯಾರಾದರೂ ಎಡಭಾಗದಲ್ಲಿ ಸಂಚರಿಸಿದರೆ, ಅವರನ್ನು ರಾಜಮನೆತನದ ಅಥವಾ ಶ್ರೀಮಂತ ಸಮಾಜ ಎಂದು ಪರಿಗಣಿಸಿ, ಸಾರ್ವಜನಿಕರು ಅವರ ಮೇಲೆ ದಾಳಿ ಮಾಡುತ್ತಾರೆ. ಅಂದಿನಿಂದ, ಕಾರುಗಳು ಮತ್ತು ಇತರ ವಾಹನಗಳಲ್ಲಿನ ಸ್ಟೀರಿಂಗ್ ಚಕ್ರವನ್ನು ವಿವಿಧ ಬದಿಗಳಲ್ಲಿ ವಿನ್ಯಾಸಗೊಳಿಸಲಾಗಿದೆ