alex Certify ಚಿಕ್ಕ ಮಕ್ಕಳಲ್ಲಿ ಹೃದಯಾಘಾತ ಏಕೆ ಸಂಭವಿಸುತ್ತದೆ…….? ಅದನ್ನು ತಪ್ಪಿಸಲು ಇಲ್ಲಿದೆ ಟಿಪ್ಸ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕ ಮಕ್ಕಳಲ್ಲಿ ಹೃದಯಾಘಾತ ಏಕೆ ಸಂಭವಿಸುತ್ತದೆ…….? ಅದನ್ನು ತಪ್ಪಿಸಲು ಇಲ್ಲಿದೆ ಟಿಪ್ಸ್‌…!

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳಲ್ಲಿ ಹೃದ್ರೋಗ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ತಪ್ಪಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ. ಇದಲ್ಲದೆ ಕೆಲವು ರೀತಿಯ ಒತ್ತಡ ಕೂಡ ಮಕ್ಕಳ ಹೃದಯವನ್ನು ಅಪಾಯಕ್ಕೆ ತಳ್ಳುತ್ತದೆ.

ಹೃದ್ರೋಗ ತಜ್ಞರ ಪ್ರಕಾರ ಇತ್ತೀಚಿನ ದಿನಗಳಲ್ಲಿ ಮಕ್ಕಳು ಯಾವುದೇ ರೀತಿಯ ದೈಹಿಕ ಕೆಲಸವನ್ನು, ಚಟುವಟಿಕೆಗಳನ್ನು ಮಾಡುತ್ತಿಲ್ಲ. ಅವರನ್ನು ಫಾಸ್ಟ್ ಫುಡ್ ಸಂಸ್ಕೃತಿಯಲ್ಲಿ ಬೆಳೆಸಲಾಗುತ್ತಿದೆ. ಇದಲ್ಲದೇ ವ್ಯಾಸಂಗದ ಒತ್ತಡವೂ ಮಕ್ಕಳ ಮೇಲೆ ಹೆಚ್ಚಾಗಿದೆ. ಹಾಗಾಗಿ ಪೋಷಕರು ಎಚ್ಚೆತ್ತುಕೊಳ್ಳಬೇಕು. ಸ್ವಲ್ಪ ಅಜಾಗರೂಕತೆ ತೋರಿದರೂ ಅದು ಮಗುವಿನ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ.

ಮಕ್ಕಳು ಹೆಚ್ಚು ನಡೆಯುವುದು, ಆಟವಾಡುವುದು ಮಾಡುತ್ತಿಲ್ಲ, ಇದು ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಮಕ್ಕಳು ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಮನೆಯಲ್ಲಿ ಅನೇಕ ತಾಯಂದಿರು ಸಹ ರೊಟ್ಟಿ ಮಾಡುವ ಬದಲು ಎರಡು ನಿಮಿಷಗಳಲ್ಲಿ ರೆಡಿಯಾಗಬಲ್ಲ ಜಂಕ್‌ ಫುಡ್‌ಗಳನ್ನು, ರೆಡಿ ಟು ಈಟ್‌ ಉಪಹಾರವನ್ನು ತಯಾರಿಸುತ್ತಿದ್ದಾರೆ. ಇದರಿಂದಾಗಿ ಹೃದಯಾಘಾತದ ಅಪಾಯವು ಹೆಚ್ಚುತ್ತಿದೆ.

ಹೃದಯಾಘಾತದಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?

ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸವಿದ್ದರೆ ಜಾಗರೂಕರಾಗಿರಿ. ಮನೆಯಲ್ಲಿ ಯಾರಾದರೂ ಹೃದಯಾಘಾತದಿಂದ ಬಳಲುತ್ತಿದ್ದರೆ ಉಳಿದವರು ಕೂಡ ಆಗಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಕ್ಕಳಲ್ಲಿ ಹೃದ್ರೋಗಕ್ಕೆ ಸ್ಥೂಲಕಾಯತೆ ಬಹುದೊಡ್ಡ ಕಾರಣವಾಗುತ್ತಿದೆ. ಇದರಿಂದ ಉಸಿರಾಟದ ತೊಂದರೆ, ಮಧುಮೇಹ ಕೂಡ ಬರಬಹುದು. ಹಾಗಾಗಿ ಪೋಷಕರು ಈ ಬಗ್ಗೆ ಕಾಳಜಿ ವಹಿಸಬೇಕು.

ಮಗು ಯಾವುದಾದರೂ ಗಂಭೀರವಾದ ಹೃದ್ರೋಗದಿಂದ ಬಳಲುತ್ತಿದ್ದರೆ ಕಾಲಕಾಲಕ್ಕೆ ವೈದ್ಯರನ್ನು ಭೇಟಿ ಮಾಡಿ. ಅವರ ಸಲಹೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳಿ. ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಅನೇಕ ಪೋಷಕರು ಸಣ್ಣ ವಿಷಯಗಳನ್ನು ನಿರ್ಲಕ್ಷಿಸುತ್ತಾರೆ, ಇದು ಮಕ್ಕಳಿಗೆ ಒಳ್ಳೆಯದಲ್ಲ. ಸಮಾಜದಲ್ಲಿ ಅಧ್ಯಯನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಒತ್ತಡವಿದೆ. ಇದಲ್ಲದೇ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಾರೆ. ಹೆಚ್ಹೆಚ್ಚು ಓದುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಇದು ಅವರ ಹೃದಯವನ್ನು ಟೊಳ್ಳಾಗಿ ಮಾಡುತ್ತದೆ ಮತ್ತು ಗಂಭೀರ ಅಪಾಯಗಳನ್ನು ಹೆಚ್ಚಿಸುತ್ತದೆ.

ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಮಕ್ಕಳು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಲು ಬಿಡಬೇಡಿ. ಮಕ್ಕಳ ಆಹಾರದ ಬಗ್ಗೆ ಗಮನ ಕೊಡಿ. ಜಂಕ್‌ ಫುಡ್‌, ಫಾಸ್ಟ್‌ ಫುಡ್‌ ಕೊಡಬೇಡಿ. ನಿಯಮಿತ ವ್ಯಾಯಾಮ ಮಾಡಿಸಿ. ಪೋಷಕರಿಗೆ ಚಿಕ್ಕ ವಯಸ್ಸಿನಲ್ಲಿ ಮಧುಮೇಹದ ಸಮಸ್ಯೆ ಕಾಡಿದ್ದರೆ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಮಗು ಸ್ಥೂಲಕಾಯಕ್ಕೆ ತುತ್ತಾಗದಂತೆ ಸಹ ನೋಡಿಕೊಳ್ಳಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...