alex Certify ದೊಡ್ಡ ಬದಲಾವಣೆಯ ಸಂಕೇತ ನೀಡ್ತಾನೆ ಕನಸಿನಲ್ಲಿ ಕಾಣುವ ಯಮರಾಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೊಡ್ಡ ಬದಲಾವಣೆಯ ಸಂಕೇತ ನೀಡ್ತಾನೆ ಕನಸಿನಲ್ಲಿ ಕಾಣುವ ಯಮರಾಜ

ಸ್ವಪ್ನ ಶಾಸ್ತ್ರ, ಸಮುದ್ರ ಶಾಸ್ತ್ರದ ಅಡಿಯಲ್ಲಿ ಬರುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿನಲ್ಲಿ ಕಾಣುವ ವ್ಯಕ್ತಿ, ವಸ್ತು ಭವಿಷ್ಯದ ಬಗ್ಗೆ ಯಾವ ಸಂಕೇತ ನೀಡಲಿದೆ ಎಂಬುದನ್ನು ಹೇಳಲಾಗಿದೆ. ಕನಸಿನಲ್ಲಿ ಕೆಲ ವಸ್ತುಗಳನ್ನು ನೋಡುವುದು ಶುಭ ಸಂಕೇತವಾಗಿದೆ. ಹಾಗೆ ಕೆಲ ವಸ್ತುಗಳು ದುಃಖ, ನೋವಿನ ಸಂಕೇತವನ್ನು ನೀಡುತ್ತವೆ.

ಕೆಲವೊಮ್ಮೆ ನಮಗೆ ಬಹಳ ವಿಚಿತ್ರ ಕನಸು ಬೀಳುತ್ತದೆ. ಅದೃಷ್ಟಕ್ಕೆ ಸಂಬಂಧಿಸಿದ ಕನಸುಗಳನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಬಿದ್ದಾಗ ಯಾರಿಗೂ ಅದನ್ನು ಹೇಳಬಾರದು ಎನ್ನಲಾಗುತ್ತದೆ. ಹಾಗೆ ಮಾಡಿದಲ್ಲಿ ಕನಸು ಸಫಲವಾಗುವುದಿಲ್ಲ ಎನ್ನಲಾಗುತ್ತದೆ.

ಯಮರಾಜನ ಹೆಸರು ಕೇಳಿದ್ರೆ ಭಯವಾಗುತ್ತದೆ. ಕನಸಿನಲ್ಲಿ ಯಮರಾಜ ಕಂಡಲ್ಲಿ ಆತಂಕ ಹೆಚ್ಚಾಗುವುದು ಸಾಮಾನ್ಯ. ಸ್ವಪ್ನ ಶಾಸ್ತ್ರದ ಪ್ರಕಾರ ಯಮ ರಾಜ ಕನಸಿನಲ್ಲಿ ಕಾಣುವುದು ಶುಭ ಸಂಕೇತವಾಗಿದೆ. ಕನಸಿನಲ್ಲಿ ಯಮ ಕಾಣುವುದು ರೋಗ ಮುಕ್ತದ ಸಂಕೇತ. ಕನಸಿನಲ್ಲಿ ಯಮ ಕಾಣಿಸಿಕೊಂಡರೆ ಅದು ವಯಸ್ಸಿನ ಬೆಳವಣಿಗೆಯ ಸೂಚಕವೆಂದು ಪರಿಗಣಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಸಂದರ್ಭದಲ್ಲಿ ಯಮರಾಜ ಕಾಣಿಸಿಕೊಂಡಲ್ಲಿ ಅದು ಶುಭ ಸಂಕೇತವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...