40 ವರ್ಷ ಮೇಲ್ಪಟ್ಟ ಪುರುಷರು ಲೈಂಗಿಕ ಜೀವನಕ್ಕೆ ಗುಡ್ ಬೈ ಹೇಳ್ತಿದ್ದ ಸಮಯವದು. ಆಗ ಅಂದ್ರೆ 1998ರಲ್ಲಿ ಫೇಜರ್ ಫಾರ್ಮಾ ಕಂಪನಿ ಪ್ರಪಂಚದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ನೀಲಿ ಬಣ್ಣದ ಸಣ್ಣ ಮಾತ್ರೆ ಅನೇಕ ಪುರುಷರ ಕೈಗೆ ತಲುಪಿ ಅವರ ಲೈಂಗಿಕ ಜೀವನವನ್ನು ಮತ್ತೆ ಸರಿ ದಾರಿಗೆ ತಂದ ವಯಾಗ್ರ ಮಾರುಕಟ್ಟೆಗೆ ಬಂದು ಇಂದಿಗೆ 20 ವರ್ಷ ಕಳೆದಿದೆ.
1991ರಲ್ಲಿ ಫಿಜರ್ ಕಂಪನಿ ರಕ್ತದ ಹರಿವಿನಿಂದ ಎದೆಯಲ್ಲಿ ಕಾಣಿಸಿಕೊಳ್ಳುವ ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಔಷಧಿಯನ್ನು ಪರೀಕ್ಷಿಸುತ್ತಿತ್ತು. ಇದ್ರಲ್ಲಿ ಪಾಲ್ಗೊಂಡಿದ್ದ ಪುರುಷರು ತಮ್ಮಲ್ಲಾದ ಅಡ್ಡಪರಿಣಾಮದ ಬಗ್ಗೆ ಹೇಳಿದ್ರು. ಈ ಔಷಧಿ, ರಕ್ತದ ಹರಿವಿನಿಂದ ಕಾಣಿಸಿಕೊಳ್ಳುವ ಎದೆ ನೋವಿನ ಸಮಸ್ಯೆಗೆ ಪರಿಹಾರ ನೀಡಲಿಲ್ಲ. ಆದ್ರೆ ಪುರುಷರ ಮತ್ತೊಂದು ಸಮಸ್ಯೆಗೆ ಸ್ಪಂದಿಸಲು ಶುರು ಮಾಡಿತ್ತು. ಇದೇ ಕಾರಣಕ್ಕೆ ಜನರು ಇದನ್ನು ಫಿಜರ್ ರೈಸರ್ ಎಂದು ಕರೆಯಲು ಶುರು ಮಾಡಿದ್ದರು. ಇದನ್ನು ಫಿಜರ್ ಗಂಭೀರವಾಗಿ ಪರಿಗಣಿಸಿತ್ತು. 1998ರಲ್ಲಿ ಲೈಂಗಿಕ ಜಗತ್ತಿನಲ್ಲಿ ಕ್ರಾಂತಿಯುಂಟು ಮಾಡಿದ, ನಪುಂಸಕತೆ ಹೊಡೆದೋಡಿಸಿದ ಮಾತ್ರೆ ಮಾರುಕಟ್ಟೆಗೆ ಲಗ್ಗೆಯಿಟ್ಟಿತು.
ವಿಶ್ವದಾದ್ಯಂತ ಲಕ್ಷಾಂತರ ಮಂದಿ ಇದನ್ನು ಬಳಸುತ್ತಿದ್ದಾರೆ. ಮೊದಲು ಅಮೆರಿಕಾದಲ್ಲಿ ಇದ್ರ ಬಳಕೆ ಶುರುವಾಯ್ತು. ಜನರು ತಮ್ಮ ಸಮಸ್ಯೆಗಳನ್ನು ಎಲ್ಲರ ಮುಂದೆ ಹೇಳಲು ಶುರು ಮಾಡಿದ್ದರು. 2015ರಲ್ಲಿ ಮಹಿಳೆಯರಿಗಾಗಿ ವಯಾಗ್ರ ತರಲಾಗಿದೆ. ಆದ್ರೆ ಪುರುಷರ ವಯಾಗ್ರದಷ್ಟು ಇದು ಪರಿಣಾಮ ಬೀರಿಲ್ಲ.
ಶಿಶ್ನದಲ್ಲಿನ ಒತ್ತಡವನ್ನು ಕಡಿಮೆ ಮಾಡಲು ವಯಾಗ್ರವನ್ನು ಬಳಸಲಾಗುತ್ತದೆ. ವಯಾಗ್ರ ಮಾತ್ರೆಗಳನ್ನು ಸೇವಿಸುವುದರಿಂದ ಶಿಶ್ನದಲ್ಲಿ ರಕ್ತದೊತ್ತಡ ಸುಧಾರಿಸುತ್ತದೆ. ವಯಾಗ್ರದಿಂದ ಅಡ್ಡ ಪರಿಣಾಮವೂ ಇದೆ. ತಲೆನೋವು, ವಾಕರಿಕೆಗೆ ಕಾರಣವಾಗುತ್ತದೆ. ಅಜೀರ್ಣ, ತಲೆ ಸುತ್ತು ಕಾಣಿಸಿಕೊಳ್ಳುತ್ತದೆ. ಹೃದಯ ರೋಗಿಗಳಿಗೆ ಇದನ್ನು ಬಳಸದಂತೆ ಸೂಚಿಸಲಾಗಿದೆ.